ಚಿಕ್ಕಬಳ್ಳಾಪುರ:ಬಾಗೇಪಲ್ಲಿ ಕೋರ್ಟ್ ಸಿಬ್ಬಂದಿ ಸೇರಿ ಜಿಲ್ಲೆಯಲ್ಲಿಂದು 8 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು ಕೋರ್ಟ್ ಸಿಬ್ಬಂದಿ ಸೇರಿ 8 ಮಂದಿಗೆ ಕೊರೊನಾ - Chikkaballapur corona case
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 8 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 8 ಮಂದಿ ಕೊರೊನಾ ಸೋಂಕಿತರು ಪತ್ತೆ..!
ಈ ಪೈಕಿ ಚಿಕ್ಕಬಳ್ಳಾಪುರದ 39 ವರ್ಷದ ಪುರುಷ, 28 ವರ್ಷದ ಪುರುಷ, 24 ವರ್ಷದ ಪುರುಷ, ಚಿಂತಾಮಣಿಯ 45 ವರ್ಷದ ಪುರುಷ, 53 ವರ್ಷದ ಮಹಿಳೆ, ಶಿಡ್ಲಘಟ್ಟದ 30 ವರ್ಷದ ಪುರುಷ, 26 ವರ್ಷದ ಮಹಿಳೆ, 58 ವರ್ಷದ ಪುರುಷನಿಗೆ ಸೊಂಕು ಧೃಡಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ.
ಬಾಗೇಪಲ್ಲಿ ಕೋರ್ಟ್ ಸಿಬ್ಬಂದಿಯೊಬ್ಬರಿಗೂ ಕೊರೊನಾ ದೃಢಪಟ್ಟ ಹಿನ್ನೆಲೆ ನ್ಯಾಯಲಯವನ್ನು ಸ್ಯಾನಿಟೈಸ್ ಮಾಡಿ, ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.