ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 79 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 17 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸೋಂಕಿತರು:
ಚಿಕ್ಕಬಳ್ಳಾಪುರ 5, ಚಿಂತಾಮಣಿ 7, ಗೌರಿಬಿದನೂರು 47, ಬಾಗೇಪಲ್ಲಿ 2, ಗುಡಿಬಂಡೆ 8, ಶಿಡ್ಲಘಟ್ಟದಲ್ಲಿ 10 ಸೋಂಕಿತ ಪ್ರಕರಣಗಳು ವರದಿಯಾಗುವ ಮೂಲಕ ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 3,318ಕ್ಕೆ ತಲುಪಿದೆ. ಪತ್ತೆಯಾದ ಸೋಂಕಿತರಲ್ಲಿ 6 ILI ಪ್ರಕರಣ, 16 ಮಂದಿಗೆ ಡೊಮೆಸ್ಟಿಕ್ ಟ್ರಾವೆಲ್ ಹಿಸ್ಟರಿ ಇದ್ದು ಉಳಿದ 57 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ತಗುಲಿರುವುದು ದೃಢಪಟ್ಟಿದೆ.