ಕರ್ನಾಟಕ

karnataka

ETV Bharat / state

ಐಪಿಎಲ್ ಹವಾ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸರ ಅತಿಥಿಗಳಾದವರೆಷ್ಟು ಮಂದಿ ಗೊತ್ತಾ!? - 67 IPL betting cases news

ಐಪಿಲ್ ಅಂದ್ರೆ ಸಾಕು ಕ್ರಿಕೆಟ್ ಪ್ರಿಯರಿಗೆ ಪ್ರತಿಯೊಂದು ಪಂದ್ಯವೂ ಒಂಥರಾ ವಿಶ್ವಕಪ್ ಫೈನಲ್‌ ಇದ್ದಂತೆ. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡು ಬೆಟ್ಟಿಂಗ್​ ದಂಧೆಯಲ್ಲಿ ತೊಡಗಿದ್ದವನ್ನ ಪೊಲೀಸರು ಬಂಧಿಸಿದ್ದಾರೆ.

ipl-betting
ಐಪಿಎಲ್ ಬೆಟ್ಟಿಂಗ್

By

Published : Nov 16, 2020, 10:23 PM IST

ಚಿಕ್ಕಬಳ್ಳಾಪುರ:ಯುವ ಜನತೆ ಐಪಿಎಲ್ ಬೆಟ್ಟಿಂಗ್ ಭೂತಕ್ಕೆ ಬಲಿಯಾಗುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ 67 ಪ್ರಕರಣಗಳು ದಾಖಲಾಗಿವೆ. 238 ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಐಪಿಎಲ್ ಸಖತ್ ಸೌಂಡ್ ಮಾಡಿದೆ ಎನ್ನಬಹುದು. 2015ರಲ್ಲಿ ಕೇವಲ ಒಂದು ಪ್ರಕರಣ ದಾಖಲಾಗಿ ಓರ್ವನನ್ನು ಪೊಲೀಸರು ಬಂಧಿಸಿದ್ದರು. ನಂತರ 2016ರಲ್ಲಿ 6 ಪ್ರಕರಣಗಳು ದಾಖಲಾಗಿ 17 ಆರೋಪಿಗಳು ಬಂಧಿತರಾಗಿದ್ದರು. 2017ರಲ್ಲಿ 3 ಪ್ರಕರಣಗಳು ದಾಖಲಾಗಿ 15 ಆರೋಪಿಗಳು ಬಂಧಿತರಾಗಿದ್ರು. 2018ರಲ್ಲಿ 2 ಪ್ರಕರಣ ದಾಖಲಾಗಿ, 18 ಆರೋಪಿಗಳು, 2019ರಲ್ಲಿ 21 ಪ್ರಕರಣ, 47 ಆರೋಪಿಗಳು ಬಂಧಿತರಾಗಿದ್ರು. 2020ರಲ್ಲಿ ಮಾತ್ರ ಕಳೆದ ಐದು ವರ್ಷಗಳಿಗಿಂತ ಪ್ರಕರಣಗಳು ಹಾಗೂ ಆರೋಪಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ವರ್ಷದ ಐಪಿಎಲ್ ಅಂತ್ಯಕ್ಕೆ 34 ಪ್ರಕರಣಗಳು ದಾಖಲಾಗಿದ್ದರೆ, ಬರೋಬ್ಬರಿ 140 ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.

2015ರಲ್ಲಿ 5100 ರೂ. ನಗದು, ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಂಡರೆ, 2016ರಲ್ಲಿ 51,505 ರೂ. ನಗದು, ಎರಡು ಫೋನ್‌ಗಳು, 2017ರಲ್ಲಿ 29,265 ರೂ. ನಗದು, 14 ಫೋನ್‌ಗಳು, 2018ರಲ್ಲಿ 9,200 ರೂ. ನಗದು, 2019ರಲ್ಲಿ 1,89,000 ರೂ. ನಗದು ಮತ್ತು 16 ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2020ರಲ್ಲಿ ಮಾತ್ರ 3,12,650 ರೂ. ನಗದನ್ನು ವಶಪಡಿಸಿಕೊಂಡು, 50 ಮೊಬೈಲ್ ಫೋನ್ ಹಾಗೂ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಐದು ವರ್ಷಗಳಿಂದ ಬರೋಬ್ಬರಿ 5,96,720 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಐಪಿಎಲ್ ಕ್ರೀಡೆಯನ್ನು ಕೇವಲ ಮನರಂಜನೆಗೆ ಪರಿಗಣಿಸದೆ ಹಣದ ಸಂಪಾದನೆಯ ಗೀಳಿಗೆ ಇಳಿದು ತಮ್ಮ ಕುಟುಂಬಗಳನ್ನೇ ಕಳೆದುಕೊಂಡಿರುವ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಪ್ರಸ್ತುತ ವರ್ಷದಲ್ಲಿ ಇಬ್ಬರು ಯುವಕರು ಐಪಿಎಲ್ ಹುಚ್ಚಿನಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ABOUT THE AUTHOR

...view details