ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: 70 ಮಂದಿ ಗುಣಮುಖ, 64 ಜನರಿಗೆ ಸೋಂಕು - New corona case

ಜಿಲ್ಲೆಯಲ್ಲಿಂದು 64 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಡುವುದರ ಮೂಲಕ ಸೋಂಕಿತರ ಸಂಖ್ಯೆ 2,444ಕ್ಕೆ ಏರಿಕೆಯಾಗಿದೆ. 70 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

Chickballapura corona case
Chickballapura corona case

By

Published : Aug 7, 2020, 7:20 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿಂದು 64 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 2,444ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಸೋಂಕು ಪತ್ತೆ:

ಚಿಕ್ಕಬಳ್ಳಾಪುರದಲ್ಲಿ 23, ಚಿಂತಾಮಣಿ 14, ಗೌರಿಬಿದನೂರು 12, ಬಾಗೇಪಲ್ಲಿ 7 ಹಾಗು ಗುಡಿಬಂಡೆಯಲ್ಲಿ 8 ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಈ ಪೈಕಿ ಒಂದು ಐಎಲ್ಐ ಪ್ರಕರಣವಾದರೆ, ಉಳಿದವರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ.

ಗುಣಮುಖರಾದವರ ವಿವರ:

ಚಿಂತಾಮಣಿಯಲ್ಲಿ 11 ಮಂದಿ, ಚಿಕ್ಕಬಳ್ಳಾಪುರ 34, ಗೌರಿಬಿದನೂರು 14, ಬಾಗೇಪಲ್ಲಿಯಲ್ಲಿ 4, ಶಿಡ್ಲಘಟ್ಟದಲ್ಲಿ 4 ಹಾಗು ಗುಡಿಬಂಡೆ‌ ವ್ಯಾಪ್ತಿಯಲ್ಲಿ 3 ಮಂದಿ ಸೇರಿದಂತೆ 70 ಮಂದಿ ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು?

ಸದ್ಯ 920 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details