ಕರ್ನಾಟಕ

karnataka

ETV Bharat / state

ಜಿಲೆಟಿನ್ ಸ್ಫೋಟದಲ್ಲಿ 6 ಜನರ ದೇಹ ಛಿದ್ರ ಛಿದ್ರ: ಮೃತರ ಗುರುತು ಪತ್ತೆ - ಚಿಕ್ಕಬಳ್ಳಾಪುರ ಕಲ್ಲು ಕ್ವಾರಿ ದುರಂತ

ಹಿರೇನಾಗವೇಲಿ ಸಮೀಪದ ಕಲ್ಲುಕ್ವಾರಿ ಬಳಿ ಜಿಲೆಟಿನ್ ಸ್ಫೋಟದಿಂದ ಮೃತದೇಹಗಳು ಛಿದ್ರ ಛಿದ್ರವಾಗಿ ಕಲ್ಲು ಕ್ವಾರಿಯಲ್ಲಿ ತೂರಿಬಿದ್ದಿದ್ದು, ಮೃತರ ಗುರುತು ಪತ್ತೆಯಾಗಿದೆ.

Chikkaballapur gelatin blast case
ಜಿಲೆಟಿನ್ ಸ್ಫೋಟದಲ್ಲಿ 6 ಜನರ ದೇಹ ಛಿದ್ರಛಿದ್ರ

By

Published : Feb 23, 2021, 2:00 PM IST

ಚಿಕ್ಕಬಳ್ಳಾಪುರ:ತಾಲೂಕಿನ ಹಿರೇನಾಗವೇಲಿ ಸಮೀಪದ ಕಲ್ಲುಕ್ವಾರಿ ಬಳಿ ಜಿಲೆಟಿನ್ ಸ್ಫೋಟ ವೇಳೆ 6 ಮಂದಿ ಮೃತಪಟ್ಟಿದ್ದು, ಮೃತರ ಫೋಟೋಗಳು ಲಭ್ಯವಾಗಿವೆ.

ಜಿಲೆಟಿನ್ ಸ್ಫೋಟದಲ್ಲಿ 6 ಜನರ ದೇಹ ಛಿದ್ರಛಿದ್ರ

ಸ್ಫೋಟದಿಂದ ಮೃತದೇಹಗಳು ಛಿದ್ರ ಛಿದ್ರವಾಗಿ ಕಲ್ಲು ಕ್ವಾರಿಯಲ್ಲಿ ತೂರಿಬಿದ್ದಿದ್ದು, ಮೃತರನ್ನು ಗಂಗಾಧರ, ಅಭಿ, ಮುರಳಿ, ಮಹೇಶ್, ರಾಮು, ಉಮಾಕಾಂತ್ ಎಂದು ಗುರುತಿಸಲಾಗಿದೆ. ಟಾಟಾ ಏಸ್ ವಾಹನದಲ್ಲಿ ಜಿಲೆಟಿನ್ ಸಾಗಿಸುತ್ತಿದ್ದ ವೇಳೆ ಸ್ಫೋಟಗೊಂಡಿದೆ ಎನ್ನಲಾಗ್ತಿದೆ. ಜಿಲೆಟಿನ್​ ಸಾಗಿಸುತ್ತಿದ್ದ ಟಾಟಾ ಏಸ್ ಡ್ರೈವರ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದ ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಪೊಲೀಸ್ ವರಿಷ್ಠಾಧಿಕಾರಿ ಮಿಥುನ್​ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ABOUT THE AUTHOR

...view details