ಕರ್ನಾಟಕ

karnataka

ETV Bharat / state

ಕೊರೊನಾಗೆ ಓರ್ವ ಮಹಿಳೆ ಬಲಿ, 42 ಮಂದಿಗೆ ಸೋಂಕು - New corona case

ಈ ಪೈಕಿ 22 ಮಂದಿ ಸೋಂಕಿತರಿಗೆ ಬೆಂಗಳೂರು ಪ್ರಯಾಣ ಬೆಳೆಸಿದ್ದ ಹಿನ್ನೆಲೆ ಇದೆ. 4 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ..

Corona case
Corona case

By

Published : Jul 12, 2020, 8:13 PM IST

ಚಿಕ್ಕಬಳ್ಳಾಪುರ :ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ ಓರ್ವ ಮಹಿಳೆ ಬಲಿಯಾಗಿದ್ದು, 42 ಮಂದಿಗೆ ಸೋಂಕು ತಗುಲಿದೆ.

ಕಳೆದ ದಿನ 20 ಸೋಂಕಿತರು ಪತ್ತೆಯಾಗಿದ್ದರು. ಇಂದು 42 ಮಂದಿ ಸೋಂಕಿತರು ಪತ್ತೆಯಾಗಿವೆ. ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ 25, ಶಿಡ್ಲಘಟ್ಟ 5, ಚಿಂತಾಮಣಿಯ 3, ಬಾಗೇಪಲ್ಲಿಯಲ್ಲಿ 9 ಸೋಂಕಿತರು ಪತ್ತೆಯಾಗಿದ್ದಾರೆ.

ಈ ಪೈಕಿ 22 ಮಂದಿ ಸೋಂಕಿತರಿಗೆ ಬೆಂಗಳೂರು ಪ್ರಯಾಣ ಬೆಳೆಸಿದ್ದ ಹಿನ್ನೆಲೆ ಇದೆ. 4 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details