ಚಿಕ್ಕಬಳ್ಳಾಪುರ: ಲೋಟಸ್ ಕಂಪನಿಗೆ ಸೇರಿದ ಸುಮಾರು 40 ಲಕ್ಷ ರೂ. ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಗೌರಿಬಿದನೂರಿನಲ್ಲಿ 40 ಲಕ್ಷ ರೂ. ವಶಕ್ಕೆ ಪಡೆದ ಅಧಿಕಾರಿಗಳು - ಗೌರಿಬಿದನೂರು, ಬೀರಮಂಗಲದ ಚೆಕ್ ಪೋಸ್ಟ್
ಶಿಫ್ಟ್ ಡಿಸೈರ್ ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 40 ಲಕ್ಷ ರೂ. ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
40 ಲಕ್ಷ ರೂ. ವಶಕ್ಕೆ ಪಡೆದ ಆದಾಯ ತೆರಿಗೆ ಅಧಿಕಾರಿಗಳು
ಗೌರಿಬಿದನೂರು ಹತ್ತಿರದ ಬೀರಮಂಗಲದ ಚೆಕ್ ಪೋಸ್ಟ್ನಲ್ಲಿ ಪಿ.ಡಿ.ಒ ವೀರಭದ್ರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸುತ್ತಿದ್ದಾಗ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ 40 ಲಕ್ಷ ಹಣ ಸಾಗಿಸುತ್ತಿದ್ದಿದ್ದು ಪತ್ತೆಯಾಗಿದೆ.
KA 50 N 6499 ಎಂಬ ಸಂಖ್ಯೆಯ ಮಾರುತಿಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಸದ್ಯ ವಶಕ್ಕೆ ಪಡೆದಿರುವ ಹಣವನ್ನು ಜಿಲ್ಲಾ ಖಜಾನೆ ಭದ್ರತಾ ಕೊಠಡಿಯಲ್ಲಿ ಇಡಲಾಗುವುದು ಎಂದು ಚುನಾವಣಾ ಪರಿಹಾರ ನಗದು ಮುಟ್ಟುಗೋಲು ಪರಿಹಾರ ಸಮಿತಿ ಸದಸ್ಯರಾದ ಮುನಿರಡ್ಡಿ ತಿಳಿಸಿದ್ದಾರೆ.
Last Updated : Dec 1, 2019, 6:49 PM IST