ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ಹಿಂದೂಳಿದ ಗ್ರಾಮಗಳ ಅಭಿವೃದ್ಧಿಗೆ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡದ ಜನಸಂಖ್ಯೆ 500ಕ್ಕಿಂತ ಹೆಚ್ಚಾಗಿರುವ ಗ್ರಾಮಗಳನ್ನು ಈಗ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಗೆ ಆಯ್ಕೆ ಮಾಡಲಾಗಿದೆ.
ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮ ಪಂಚಾಯತಿಯ ಸಿಂಗಾಟಕದಿರೇನಹಳ್ಳಿ, ಕುಪ್ಪಳ್ಳಿ ಗ್ರಾಮ ಪಂಚಾಯತಿಯ ಕುಪ್ಪಳ್ಳಿ, ಪೋಶೆಟ್ಟಿಹಳ್ಳಿ ಗ್ರಾ.ಪಂನ ಬಾಲಕುಂಟಹಳ್ಳಿ, ಗುರುಕಲನಾಗೇನಹಳ್ಳಿ, ಪರೇಸಂದ್ರ ಗ್ರಾ.ಪಂನ ಬೊಯನಹಳ್ಳಿ, ಕುಮ್ಮಗುಟ್ಟಹಳ್ಳಿ ಗ್ರಾ.ಪಂನ ಬೊಮ್ಮನಹಳ್ಳಿ, ಅಗಲಗುರ್ಕಿ ಗ್ರಾ.ಪಂನ ಚಿಕ್ಕಕಾಡಿಗನಹಳ್ಳಿ, ಮುದ್ದೇನಹಳ್ಳಿ ಗ್ರಾ.ಪಂನ ನಲ್ಲಕದಿರೇನಹಳ್ಳಿ ಆಯ್ಕೆ ಆಗಿವೆ. ಇನ್ನು ಬಾಗೇಪಲ್ಲಿ ತಾಲೂಕಿನ ಅಂಚೇಪಲ್ಲಿ, ಪಾಳ್ಯಕೆರೆ ಗ್ರಾ.ಪಂನ ಮಂಡಂಪಲ್ಲಿ, ಜಿಲಿಪಿಗಾರಪಲ್ಲಿ, ನಲ್ಲರೆಡ್ಡಿಪಲ್ಲಿ ಗ್ರಾ.ಪಂನ ನಲ್ಲರೆಡ್ಡಿಪಲ್ಲಿ, ದೇವರಗುಡಿಪಲ್ಲಿ ಗ್ರಾ.ಪಂನ ಪನಮಲೆ, ಎಂ. ನಲ್ಲಗುಟ್ಟಪಲ್ಲಿ ಗ್ರಾ.ಪಂನ ಕೊಂಡಿಕೊಂಡ, ಗೂಳೂರು ಗ್ರಾ.ಪಂನ ಸದ್ದುಪಲ್ಲಿ, ಮಿಟ್ಟೇಮರಿ ಗ್ರಾ.ಪಂನ ಬೂರಗಮಡಗು ಆಯ್ಕೆಯಾಗಿವೆ.