ಚಿಕ್ಕಬಳ್ಳಾಪುರ:ಕಾರಿನಲ್ಲಿ ಹೊರಟಿದ್ದ ದನದ ವ್ಯಾಪಾರಿಗಳನ್ನು ಅಡ್ಡಗಟ್ಟಿ 3 ಲಕ್ಷ ನಗದು ಹಾಗೂ 3 ಮೊಬೈಲ್‌ಗಳನ್ನು ಕಿತ್ತುಕೊಂಡಿರುವ ಘಟನೆ ತಾಲೂಕಿನ ಹಾರೋಬಂಡೆ ಬಳಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ದರೋಡೆ: ಕಾರು ಅಡ್ಡಗಟ್ಟಿ 3 ಲಕ್ಷ ನಗದು, 3 ಮೊಬೈಲ್ ಕಸಿದು ಖದೀಮರು ಪರಾರಿ - chickballapura theft latest news
ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದ 4 ಜನರನ್ನು ಅಡ್ಡಗಟ್ಟಿ, 3 ಲಕ್ಷ ಹಣ ಹಾಗೂ 3 ಮೊಬೈಲ್‌ಗಳನ್ನು ಕಿತ್ತುಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಲ್ಲಿ ನಡೆದಿದೆ.

ಎನ್.ಹೆಚ್-7 ಹಾರೋಬಂಡೆ ಬಳಿ ಕಾರು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಕಾರಿನಲ್ಲಿದ್ದ 4 ನಾಲ್ವರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವರ ಬಳಿ ಇದ್ದ 3 ಲಕ್ಷದ 10 ಸಾವಿರ ರೂಪಾಯಿ ನಗದು ಹಾಗೂ 3 ಮೊಬೈಲ್‌ಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಬೆಂಗಳೂರು ಮೂಲದ ಸಾದೀಕ್, ಫಕ್ರುಬಾಬು, ಮುಷರಪ್, ಅರುಣ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದಿದೆ.
ಕಾರಿನಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು ಬೆಂಗಳೂರಿನಿಂದ ಅನಂತಪುರಕ್ಕೆ ಬಾಡಿಗೆ ಕಾರಿನಲ್ಲಿ ಹೊರಟಿದ್ದ 4 ಜನ (ದನದ ವ್ಯಾಪಾರಸ್ಥ)ರನ್ನು ದಿಢೀರ್ ಅಡ್ಡಗಟ್ಟಿ ಸಿನಿಮಿಯ ರೀತಿಯಲ್ಲಿ ದರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.