ಚಿಕ್ಕಬಳ್ಳಾಪುರ:ಲಾಕ್ಡೌನ್ ಸಡಿಲಿಕೆಯಾದಾಗಿನಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿವೆ. ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆಗಳಿಗೂ ಈಗ ಕೊರೊನಾ ವಕ್ಕರಿಸಿದೆ.
ಚಿಕ್ಕಬಳ್ಳಾಪುರಕ್ಕೆ ಕಂಟಕವಾದ 'ಮಹಾ' ಸೋಂಕು... ಇಂದು 27 ಹೊಸ ಪ್ರಕರಣಗಳು ಪತ್ತೆ - ಚಿಕ್ಕಬಳ್ಳಾಪುರ ಕೊರೊನಾ ವೈರಸ್ ವಿವರ
ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರಲ್ಲಿ ಇಂದೂ ಕೂಡಾ 27 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರದಲ್ಲಿ 26 ಹೊಸ ಕೊರೊನಾ ಪ್ರಕರಣಗಳು ವರದಿ
ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದೀಗ ಮಹಾರಾಷ್ಟ್ರದಿಂದ ರಾಜ್ಯಕ್ಕೆ ವಾಪಸಾಗುತ್ತಿರುವ ವಲಸೆ ಕಾರ್ಮಿಕರು ತಮ್ಮೊಂದಿಗೆ ಕೊರೊನಾ ವೈರಸ್ಅನ್ನು ಕೂಡಾ ಹೊತ್ತು ತರುತ್ತಿದ್ದಾರೆ.
ಇಂದು ಕೂಡಾ ಮಹಾರಾಷ್ಟ್ರದಿಂದ ಬಂದ 27 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 126 ಕ್ಕೆ ಏರಿಕೆಯಾಗಿದೆ. ಇನ್ನೂ 45 ಜನರ ವರದಿ ಬರಬೇಕಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
Last Updated : May 24, 2020, 8:45 PM IST