ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: 231 ಮಂದಿ ಸೋಂಕಿನಿಂದ ಗುಣಮುಖ - Chikkaballapura corona latest news

ಇಂದು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 231 ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Chikaballapura
Chikaballapura

By

Published : Oct 25, 2020, 7:15 PM IST

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಇಂದು 231 ಜನರು ಸೋಂಕಿನಿಂದ ಗುಣಮುಖರಾಗಿದ್ದು, 76 ಮಂದಿಗೆ ಸೋಂಕು ತಗುಲಿದೆ.

ಗುಣಮುಖ :

ಜಿಲ್ಲೆಯಲ್ಲಿ ಇಂದು 231 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ‌ಚಿಕ್ಕಬಳ್ಳಾಪುರ 57, ಬಾಗೇಪಲ್ಲಿ 5,ಚಿಂತಾಮಣಿ 41, ಗೌರಿಬಿದನೂರು 60, ಗುಡಿಬಂಡೆ 21 ಹಾಗು ಶಿಡ್ಲಘಟ್ಟದಲ್ಲಿ 47 ಸೋಂಕಿತರು ಗುಣಮುಖರಾಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ 9,953 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಲೂಕುವಾರು ಕೋವಿಡ್ ವಿವರ:

ಚಿಕ್ಕಬಳ್ಳಾಪುರ 22, ಚಿಂತಾಮಣಿ 7, ಗೌರಿಬಿದನೂರು 41, ಗುಡಿಬಂಡೆ 1,ಶಿಡ್ಲಘಟ್ಟ 5 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,938 ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details