ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಿನ್ನೆ 181 ಕೊರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, 143 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜೊತೆಗೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ.
ಸೋಂಕಿತರ ತಾಲೂಕುವಾರು ವಿವರ:
ಚಿಕ್ಕಬಳ್ಳಾಪುರ 32, ಬಾಗೇಪಲ್ಲಿ 34, ಚಿಂತಾಮಣಿ 20, ಗೌರಿಬಿದನೂರು 46, ಗುಡಿಬಂಡೆ 24, ಶಿಡ್ಲಘಟ್ಟ 25 ಸೋಂಕಿತರು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರು ಸಂಖ್ಯೆ 10,748 ಕ್ಕೆ ಏರಿಕೆಯಾಗಿದೆ.