ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 160 ಸೋಂಕಿತರು ಪತ್ತೆಯಾಗಿದ್ದು, 157 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಬಿಡುಗಡೆಗೊಂಡಿದ್ದಾರೆ. ಇನ್ನು ಚಿಕಿತ್ಸೆ ಫಲಕಾರಿಯಾಗದೇ ಒಬ್ಬ ಸೋಂಕಿತೆ ಮೃತ ಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ 31, ಬಾಗೇಪಲ್ಲಿ 45, ಚಿಂತಾಮಣಿ 1, ಗೌರಿಬಿದನೂರು 77, ಗುಡಿಬಂಡೆ 5, ಶಿಡ್ಲಘಟ್ಟದಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದಂತೆ ಒಟ್ಟು 160 ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10,567 ಕ್ಕೆ ಏರಿಕೆಯಾಗಿದೆ.