ಕರ್ನಾಟಕ

karnataka

ETV Bharat / state

ಪಬ್​ಜಿ ಗೇಮ್​ ಆಡಲು ಮೊಬೈಲ್ ಕೊಡದ ಅಕ್ಕ... ಮನನೊಂದ ಬಾಲಕ ಹೀಗ್​ ಮಾಡ್ಕೊಳದಾ! - ಅಕ್ಕ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಯಶ್ವಂತ್ (15) ವಿಷ ಕುಡಿದು ಆತ್ಮಹತ್ಯೆ

ಮನೆಯಲ್ಲಿ ಪಬ್​ಜಿ ಗೇಮ್ ಹಾಗೂ ಟಿಕ್ ಟಾಕ್ ವಿಡಿಯೋ ಮಾಡಲು ತನ್ನ ಅಕ್ಕ ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

15-year-old-young-boy-suicide-in-chikkaballapura
ಯಶ್ವಂತ್ (15) ವಿಷ ಕುಡಿದು ಆತ್ಮಹತ್ಯೆ

By

Published : Dec 24, 2019, 10:49 AM IST

ಚಿಕ್ಕಬಳ್ಳಾಪುರ:ಜಿಲ್ಲೆಯ ಚೇಳೂರು (ನೂತನ ತಾಲೂಕು) ಮಂಡ್ಯಂಪಲ್ಲಿಯಲ್ಲಿ ಪಬ್ ಜಿ ಗೇಮ್ ಆಡಲು ಮೊಬೈಲ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನನೊಂದಿರುವ ಬಾಲಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಶ್ವಂತ್ ತನ್ನ ಅಕ್ಕಳಾದ ಅಖಿಲಳ ಬಳಿ ಮೊಬೈಲ್ ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ಹೆಚ್ಚು ಮೊಬೈಲ್ ಬಳಸಬಾರದು ಎಂದು ಬುದ್ಧಿ ಮಾತು ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಯಶ್ವಂತ್ ಗಿಡಗಳಿಗೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಸೇವಿಸಿದ್ದ. ಕೂಡಲೇ ಆತನನ್ನುಚೇಳೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ವೇಳೆ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.

For All Latest Updates

TAGGED:

ABOUT THE AUTHOR

...view details