ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿನಗರದ ಮನೆಯೊಂದರಲ್ಲಿ ಕೊರೊನಾ ಶಂಕಿತ 15 ಜನ ಒಂದೇ ಮನೆಯಲ್ಲಿ ವಾಸ್ತವ್ಯ ಹೂಡಿರುವುದು ಪತ್ತೆಯಾಗಿದೆ.
ಕೊರೊನಾ ಶಂಕಿತ 15 ಜನ ಒಂದೇ ಮನೆಯಲ್ಲಿ ವಾಸ್ತವ್ಯ.. - ಕೊರೊನಾ ಶಂಕಿತರು ಗುಡಿಬಂಡೆಯಲ್ಲಿ ವಾಸ್ತವ್ಯ
ವಾಸ್ತವ್ಯ ಹೂಡಿದವರಲ್ಲಿ ಪ್ರಾಥಮಿಕ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಶಂಕಿತ ಜ್ವರದಿಂದ ಬಳಲುತ್ತಿದ್ದಾರೆ. ಈ 15 ಮಂದಿ ಹಿರೇಬಿದನೂರು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದು, ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಗುಡಿಬಂಡೆ ಜನ ತಕ್ಷಣ ಪೊಲೀಸ್‌ರಿಗೆ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
![ಕೊರೊನಾ ಶಂಕಿತ 15 ಜನ ಒಂದೇ ಮನೆಯಲ್ಲಿ ವಾಸ್ತವ್ಯ.. 15 suspected corona people found in gudibande](https://etvbharatimages.akamaized.net/etvbharat/prod-images/768-512-6669953-thumbnail-3x2-surya.jpg)
ಇವರೆಲ್ಲಾ ಕೊರೊನಾ ಸೋಂಕಿತರಿರುವ ಹಿರೇಬಿದನೂರು ಗ್ರಾಮದಿಂದ ಆಗಮಿಸಿ ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ವಾಸ್ತವ್ಯ ಹೂಡಿದವರಲ್ಲಿ ಪ್ರಾಥಮಿಕ ಕೊರೊನಾ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಶಂಕಿತ ಜ್ವರದಿಂದ ಬಳಲುತ್ತಿದ್ದಾರೆ. ಈ 15 ಮಂದಿ ಹಿರೇಬಿದನೂರು ಹಾಗೂ ಬೆಂಗಳೂರಿನಿಂದ ಆಗಮಿಸಿದ್ದು, ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ಗುಡಿಬಂಡೆ ಜನ ತಕ್ಷಣ ಪೊಲೀಸ್‌ರಿಗೆ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಧಿಕಾರಿಗಳು ಮನೆಯಲ್ಲಿ ಅಡಗಿದ್ದ 15 ಜನರನ್ನು ಕರೆದೊಯ್ದಿದ್ದಾರೆ. ಎಲ್ಲರನ್ನೂ ಗುಡಿಬಂಡೆ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗ್ತಿದೆ. ಈ ಘಟನೆಯಿಂದ ಗುಡಿಬಂಡೆ ಜನರಲ್ಲಿ ಕೋವಿಡ್-19 ಹರಡುವ ಆತಂಕ ಮತ್ತಷ್ಟು ಹೆಚ್ಚಿದೆ. ಹೀಗಾಗಿ ಶಂಕಿತರ ವಾಸ್ತವ್ಯಕ್ಕೆ ಅವಕಾಶ ಕೊಟ್ಟವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.