ಚಿಕ್ಕಬಳ್ಳಾಪುರ: ರೂಪಾಂತರಗೊಂಡ ಕೊರೊನಾ ವೈರಸ್ ಭೀತಿ ಹಿನ್ನೆಲೆ ಇಂಗ್ಲೆಂಡ್ನಿಂದ ಚಿಕ್ಕಬಳ್ಳಾಪುರಕ್ಕೆ 15 ಮಂದಿ ಬಂದಿದ್ದಾರೆಂದು ಜಿಲ್ಲಾಧಿಕಾರಿ ಆರ್.ಲತಾ ಮಾಹಿತಿ ನೀಡಿದ್ದಾರೆ.
ಪ್ರಪಂಚ ಎರಡನೇ ಅಲೆಯ ಕೊರೊನಾ ಭೀತಿಯಲಿದ್ದು, ಸದ್ಯ ಇಂಗ್ಲೆಂಡ್ನಿಂದ 15 ಮಂದಿ ಜಿಲ್ಲೆಗೆ ಬಂದಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. UKಯಿಂದ ಬಂದ ಜಿಲ್ಲೆಯ 15 ಜನರ ಪೈಕಿ 5 ಜನ ಬೇರೆ ಜಿಲ್ಲೆ ಹಾಗೂ ಇತರೆ ರಾಜ್ಯಕ್ಕೆ ಹೋಗಿದ್ದಾರೆ. ಉಳಿದ 10 ಜನ ಹಾಗೂ ಅವರ ಕುಟುಂಬಸ್ಥರ ಗಂಟಲು ದ್ರವದ ಮಾದರಿ ಟೆಸ್ಟ್ ಮಾಡಿಸಲಾಗಿದೆ. ಟೆಸ್ಟ್ ಮಾಡಿಸಿದವರ ಪೈಕಿ ವಿದೇಶದಿಂದ ಬಂದಿದ್ದ 5 ಜನರಿಗೆ ನೆಗೆಟಿವ್ ವರದಿ ಬಂದಿದೆ. ಉಳಿದ 5 ಜನರ ವರದಿ ಬರಬೇಕಿದೆ. ಸದ್ಯ10 ಜನರಿಗೆ 28 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲು ಸೂಚಿಸಲಾಗಿದೆ.