ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಮಳೆ ಅವಾಂತರಕ್ಕೆ ಗ್ರಾಮದ 15 ಮನೆಗಳ ಗೋಡೆ ಕುಸಿತ - ಹಿರೇಪಾಳ್ಯ ಗ್ರಾಮದಲ್ಲಿ ಬಾರೀ ಮಳೆ

ಚಿಂತಾಮಣಿ ತಾಲೂಕಿನ ಹಿರೇಪಾಳ್ಯ ಗ್ರಾಮದಲ್ಲಿ ಮಹಾಮಳೆಯ ಪರಿಣಾಮ 15 ಕುಟುಂಬಗಳು ಬೀದಿಗೆ ಬಂದಿವೆ.

wall collapse
ಮಹಾಮಳೆಗೆ ಗೋಡೆ ಕುಸಿತ

By

Published : Nov 19, 2021, 5:47 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಒಂದೇ ಗ್ರಾಮದ ಸುಮಾರು ಹದಿನೈದು ಮನೆಗಳ ಗೋಡೆ ಕುಸಿತಗೊಂಡ ಘಟನೆ ನಡೆದಿದೆ.


ಚಿಂತಾಮಣಿ ತಾಲೂಕಿನ ಹಿರೇಪಾಳ್ಯ ಗ್ರಾಮದಲ್ಲಿ ಮಹಾಮಳೆಯ ಪರಿಣಾಮ 15 ಕುಟುಂಬಗಳು ಬೀದಿಗೆ ಬಂದಿವೆ. ವಸತಿ ಕಳೆದುಕೊಂಡ ಜನರು ಮಳೆಯಲ್ಲಿ ನಿಂತು ಕಣ್ಣೀರಿಡುವಂತಾಗಿದೆ.


ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ಇದುವರೆಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸರಿಸುಮಾರು 50ಕ್ಕೂ ಹೆಚ್ಚು ಮನೆಗಳ ಗೋಡೆ ಕುಸಿತವಾಗಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಸುಮಾರು 90 ಕೋಟಿಗೂ ಅಧಿಕ ಮೌಲ್ಯದ ಬೆಳೆ ನಷ್ಟವಾಗಿದೆ ಎನ್ನಲಾಗಿದೆ.


ಇದನ್ನೂ ಓದಿ:ಯಾದಗಿರಿ : 5 ತಿಂಗಳ ಮಗುವಿನ ಜತೆಗೇ ಕರ್ತವ್ಯಕ್ಕೆ ಹಾಜರಾದ ಮಹಿಳಾ ಕಾನ್​ಸ್ಟೇಬಲ್..

ABOUT THE AUTHOR

...view details