ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಮೊದಲ ಸೋಂಕು ಕಾಣಿಸಿಕೊಂಡಿದ್ದ ಗೌರಿಬಿದನೂರಿನಲ್ಲಿ ಇಂದು ನಾಲ್ಕು ವರ್ಷದ ಮಗು ಸೇರಿ 15 ಮಂದಿಗೆ ಸೋಂಕು ತಗುಲಿದೆ.
ಗೌರಿಬಿದನೂರು: 5,7,8 ವರ್ಷದ ಮಕ್ಕಳೂ ಸೇರಿ 15 ಮಂದಿಗೆ ಸೋಂಕು - Chikkaballapur district news
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಾಲ್ಕು ವರ್ಷದ ಮಗು ಸೇರಿ 15 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಪರ್ಕದಲ್ಲಿ ಇದ್ದವರನ್ನು ಕ್ವಾರಂಟೈನ್ ಮಾಡಲಾಗಿದೆ.
![ಗೌರಿಬಿದನೂರು: 5,7,8 ವರ್ಷದ ಮಕ್ಕಳೂ ಸೇರಿ 15 ಮಂದಿಗೆ ಸೋಂಕು](https://etvbharatimages.akamaized.net/assets/images/breaking-news-placeholder.png)
ಬೆಂಗಳೂರು ಹಾಗೂ ನೆರೆ ರಾಜ್ಯ ಆಂಧ್ರಪ್ರದೇಶದ ಹಿಂದೂಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಎಲ್ಲರಿಗೂ ಸೊಂಕು ಖಾತ್ರಿಯಾಗಿದೆ. ಈ ಸೋಂಕಿತರ ಪೈಕಿ ಎಂಟು, ಐದು ವರ್ಷದ ಬಾಲಕ ಮತ್ತು ಏಳು ವರ್ಷ ಬಾಲಕಿ ಕೂಡ ಇದ್ದಾರೆ.
ಇಲ್ಲಿನ ಗ್ರಾಮಾಂತರ ಠಾಣೆಯ ಪಿಎಸ್ಐ ಮತ್ತು ಶಿಡ್ಲಘಟ್ಟ ತಾಲೂಕು ಕಚೇರಿಯ ಸಿಬ್ಬಂದಿಗೂ ಸೋಂಕು ದೃಢಪಟ್ಟಿದ್ದು, ಎರಡೂ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ.