ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 141 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿದ್ದು, ಒಟ್ಟು ಸೊಂಕಿತರ ಸಂಖ್ಯೆ 5278 ಕ್ಕೆ ಏರಿಕೆಯಾಗಿದೆ.126 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 31, ಚಿಂತಾಮಣಿ 9, ಗೌರಿಬಿದನೂರು 40, ಬಾಗೇಪಲ್ಲಿ 45 ಹಾಗೂ ಶಿಡ್ಲಘಟ್ಟದಲ್ಲಿ 16 ಪ್ರಕರಣಗಳು ಪತ್ತೆಯಾಗಿದ್ದು, ಇಂದು ಒಟ್ಟು 141 ಮಂದಿಯಲ್ಲಿ ಸೋಂಕು ಧೃಡಪಟ್ಟಿದೆ. ಒಟ್ಟಾರೆ ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 5278 ಕ್ಕೆ ಏರಿಕೆಯಾಗಿದೆ.