ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: 114 ಮಂದಿಗೆ ತಗುಲಿದ ಕೊರೊನಾ, ಇಬ್ಬರು ಬಲಿ

ಜಿಲ್ಲೆಯಲ್ಲಿ ಇಂದು ಕಂಡುಬಂದ ಕೊರೊನಾ ಸೋಂಕಿತ ಪ್ರಕರಣಗಳು, ಸಾವಿಗೀಡಾದವರು ಸೇರಿದಂತೆ ಇತರೆ ವಿವರಗಳು ಇಲ್ಲಿವೆ.

Chickballapura corona cases
Chickballapura corona cases

By

Published : Aug 30, 2020, 6:55 PM IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೊಸದಾಗಿ 114 ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ ನಾಲ್ಕು ಸಾವಿರದ ಗಡಿ ದಾಟಿದೆ. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಕೊನೆಯುಸಿರೆಳೆದಿದ್ದಾರೆ.

ಚಿಂತಾಮಣಿಯ 50 ವರ್ಷದ ವ್ಯಕ್ತಿ ಹಾಗೂ ಚಿಕ್ಕಬಳ್ಳಾಪುರದ 35 ವರ್ಷದ ಮಹಿಳೆ ಮೃತಪಟ್ಟಿದ್ದು, ಈ ಮೂಲಕ ಮೃತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

ಚಿಕ್ಕಬಳ್ಳಾಪುರ- 38, ಚಿಂತಾಮಣಿ- 36, ಗೌರಿಬಿದನೂರು- 6, ಬಾಗೇಪಲ್ಲಿ- 21, ಗುಡಿಬಂಡೆ- 7, ಶಿಡ್ಲಘಟ್ಟದಲ್ಲಿ 6 ಸೋಂಕು ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಾದ್ಯಂತ ಸೋಂಕಿತರ ಸಂಖ್ಯೆ 4,108ಕ್ಕೆ ಏರಿಕೆಯಾಗಿದೆ.

ಈ ಪೈಕಿ 27 ಸೋಂಕಿತರಿಗೆ ಐಎಲ್ಐ ಸಂಪರ್ಕ, 12 ಮಂದಿಗೆ ಡೊಮೆಸ್ಟಿಕ್ ಟ್ರಾವೆಲ್ ಹಿಸ್ಟರಿ ಇದ್ದು, ಉಳಿದ 75 ಜನರಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಸೋಂಕು ದೃಢಪಟ್ಟಿದೆ.

ಚಿಂತಾಮಣಿ- 13, ಚಿಕ್ಕಬಳ್ಳಾಪುರ- 7, ಬಾಗೇಪಲ್ಲಿ- 4, ಶಿಡ್ಲಘಟ್ಟ- 6, ಗೌರಿಬಿದನೂರು‌- 9 ಹಾಗೂ ಗುಡಿಬಂಡೆ‌ ವ್ಯಾಪ್ತಿಯಲ್ಲಿ 6 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಸದ್ಯ 715 ಸಕ್ರಿಯ ಪ್ರಕರಣಗಳಿಗೆ ಜಿಲ್ಲೆಯ ಐಸೊಲೇಷನ್ ಸೇರಿದಂತೆ ತಾಲೂಕಿನ ಕೋವಿಡ್ ಕೇರ್ ಸೆಂಟರ್‌, ಹೋಂ ಐಸೊಲೇಷನ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details