ಕರ್ನಾಟಕ

karnataka

ETV Bharat / state

ಕೊಲೆ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ.. ಹೆಣ್ಣು ಮಗುವಿಗೆ ಜನ್ಮ‌ಕೊಟ್ಟ 10ನೇ ಕ್ಲಾಸ್​ ಬಾಲಕಿ.. - ಚಿಕ್ಕಬಳ್ಳಾಪುರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ

ಬಾಲಕಿಯ ವಿಚಾರಣೆಯ ವೇಳೆ 'ನವೀನ್​ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಬಳಿಕ ತನಗೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದ. ಇದರಿಂದ ಹೆದರಿ ವಿಷಯ ಮುಚ್ಚಿಟ್ಟಿದ್ದೆ' ಎಂದು ತಿಳಿಸಿದ್ದಾಳೆ..

chikkaballapur
ಅತ್ಯಾಚಾರ

By

Published : Jan 15, 2022, 4:53 PM IST

ಚಿಕ್ಕಬಳ್ಳಾಪುರ :ಯುವಕನೊಬ್ಬ ಕೊಲೆ ಬೆದರಿಕೆ ಹಾಕಿ ಅಪ್ರಾಪ್ತಳನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಲ್ಲದೇ, ಅವಳಿಗೀಗ ಮಗುವನ್ನು ಕರುಣಿಸಿದ ಘಟನೆ ಇಂದು ಸಂಕ್ರಾಂತಿ ಹಬ್ಬದಂದು ಜಿಲ್ಲೆಯ ಚಿಂತಾಮಣಿ ತಾಲೂಕು ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

ಚಿಂತಾಮಣಿ ತಾಲೂಕಿನ ಖಾಸಗಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯೊಬ್ಬಳನ್ನು ಯುವಕ ನವೀನ್ ಎಂಬಾತ ಪ್ರಾಣ ಬೆದರಿಕೆ ಹಾಕಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ನಿನ್ನೆಯಷ್ಟೇ ಬಾಲಕಿಯು ಹೊಟ್ಟೆ ನೋವು ಎಂದು ಪೋಷಕರಿಗೆ ತಿಳಿಸಿದ್ದಾಳೆ. ಬಳಿಕ ಆಸ್ಪತ್ರೆಯಲ್ಲಿ ದಾಖಲಿಸಿ ಪರಿಶೀಲಿಸಿದಾಗ ಬಾಲಕಿ ಗರ್ಭಿಣಿಯಾಗಿದ್ದು ಗೊತ್ತಾಗಿದೆ.

ಪ್ರಸವ ವೇದನೆಯಿಂದ ಬಳಲುತ್ತಿದ್ದ ಬಾಲಕಿ ಇಂದು ಚಿಂತಾಮಣಿಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಾಲಕಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ಬಾಲಕಿಯ ವಿಚಾರಣೆಯ ವೇಳೆ 'ನವೀನ್​ ನನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ. ಬಳಿಕ ತನಗೆ ಜೀವ ಬೆದರಿಕೆ ಕೂಡ ಹಾಕುತ್ತಿದ್ದ. ಇದರಿಂದ ಹೆದರಿ ವಿಷಯ ಮುಚ್ಚಿಟ್ಟಿದ್ದೆ' ಎಂದು ತಿಳಿಸಿದ್ದಾಳೆ. ಬಾಲಕಿ ನೀಡಿದ ಹೇಳಿಕೆಯ ಮೇರೆಗೆ ಪೋಕ್ಸೋ ಕಾಯ್ದೆಯಡಿ ಕೇಸ್​ ದಾಖಲಿಸಿಕೊಂಡ ಪೊಲೀಸರು ಆರೋಪಿ ನವೀನ್​ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಗಾಳಿಪಟಕ್ಕಾಗಿ ವಿದ್ಯುತ್​ ಕಂಬ ಏರಿದ ಬಾಲಕನಿಗೆ ಕರೆಂಟ್​ ಶಾಕ್​.. ಸ್ಥಿತಿ ಗಂಭೀರ

ABOUT THE AUTHOR

...view details