ಕರ್ನಾಟಕ

karnataka

ETV Bharat / state

ದೊಡ್ಡಗಾಜನೂರಲ್ಲಿ ದೊಡ್ಮನೆ ಯುವರಾಜ್​​​ಕುಮಾರ್ ಅರಿಶಿಣ ಶಾಸ್ತ್ರ - undefined

ಮೇ 26 ರಂದು ಬೆಂಗಳೂರಿನಲ್ಲಿ ಯುವರಾಜ್​​ಕುಮಾರ್ ವಿವಾಹ ಜರುಗಲಿದೆ. ಇಂದು ಚಾಮರಾಜನಗರದ ದೊಡ್ಡಗಾಜನೂರಿನ ಮನೆಯಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿದೆ.

ಯುವರಾಜ್​​​ಕುಮಾರ್ ಅರಿಶಿಣ ಶಾಸ್ತ್ರ

By

Published : May 20, 2019, 6:08 PM IST

ಚಾಮರಾಜನಗರ: ನಟ ರಾಘವೇಂದ್ರ ರಾಜ್​​ಕುಮಾರ್ ಎರಡನೇ ಪುತ್ರ ಯುವರಾಜ್​​​ಕುಮಾರ್ ಮದುವೆ ಇದೇ ತಿಂಗಳ 26 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ದೊಡ್ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

ಯುವರಾಜ್​​​ಕುಮಾರ್
ಅರಿಶಿಣ ಶಾಸ್ತ್ರ

ಇಂದು ದೊಡ್ಡಗಾಜನೂರಿನ ಮನೆಯಲ್ಲಿ ಯುವರಾಜ್​​ಕುಮಾರ್​​ಗೆ ಅರಿಶಿಣ ಶಾಸ್ತ್ರ ನೆರವೇರಿತು. ಸಡಗರ ಸಂಭ್ರಮದೊಂದಿಗೆ ರಾಘವೇಂದ್ರ ರಾಜ್​​ಕುಮಾರ್, ಪತ್ನಿ ಮಂಗಳ, ವಿನಯ್ ರಾಜ್​​​ಕುಮಾರ್​​​, ಅಜ್ಜಿ ನಾಗಮ್ಮ ಮತ್ತು ಸಂಬಂಧಿಗಳು ಯುವರಾಜ್​​ಕುಮಾರ್​​​​ಗೆ ಅರಿಶಿಣ ಬಳಿದು ಶಾಸ್ತ್ರೋಕ್ತ ಕಾರ್ಯಗಳನ್ನು ನೆರವೇರಿಸಿದರು.

ಯುವರಾಜ್​​​ಕುಮಾರ್ ಅರಿಶಿಣ ಶಾಸ್ತ್ರ

ದೊಡ್ಡಗಾಜನೂರಿನ ಮನೆಯನ್ನು ಡಾ. ರಾಜ್​​ಕುಮಾರ್​ ಬಹಳ ಆಸೆಯಿಂದ ಕಟ್ಟಿಸಿದ್ದರು. ಈ ಹಿಂದೆ ಶಿವಣ್ಣನ ಪುತ್ರಿಗೂ ಇದೇ ಮನೆಯಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿತ್ತು. ದೊಡ್ಮನೆಯ ಬಹುತೇಕ ಶುಭ-ಸಮಾರಂಭಗಳಿಗೆ ಅಣ್ಣಾವ್ರ ಮೆಚ್ಚಿನ ಮನೆ ಸಾಕ್ಷಿಯಾಗಿದೆ.

ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಸಂಬಂಧಿಕರು

For All Latest Updates

TAGGED:

ABOUT THE AUTHOR

...view details