ಕರ್ನಾಟಕ

karnataka

ETV Bharat / state

ಕುಗ್ರಾಮ ದೊಡ್ಡಾನೆಯನ್ನು ಸ್ವರ್ಗ ಮಾಡಲು ಮುಂದಾದ ಯುವ ಬ್ರಿಗೇಡ್​​​​​​​​​!

ಸರ್ಕಾರದ ಸೌಲಭ್ಯಗಳಿಂದ ದೂರ ಇರುವ ಈ ಕುಗ್ರಾಮವನ್ನು ಸ್ವರ್ಗ ಮಾಡಲು ಮುಂದಾಗಿರುವ ಯುವ ಬ್ರಿಗೇಡ್ ತಂಡವನ್ನು ಜನಪ್ರತಿನಿಧಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕಿದೆ. ಹಿಂದುಳಿದ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

By

Published : Jun 8, 2019, 4:22 PM IST

ಯುವಾ ಬ್ರಿಗೇಡ್ ತಂಡ

ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಶ್ರೇಣಿಯಲ್ಲಿರುವ ದೊಡ್ಡಾನೆ ಗ್ರಾಮವನ್ನು ದತ್ತು ಪಡೆದಿರುವ ಯುವ ಬ್ರಿಗೇಡ್ ತಂಡ, ಗ್ರಾಮಕ್ಕೆ ಬೇಕಾದ ಮೂಲ ಸೌಕರ್ಯ ಒದಗಿಸುವ ಸಲುವಾಗಿ ಇಂದು ತಂಡದ 50ಕ್ಕೂ ಅಧಿಕ ಕಾರ್ಯಕರ್ತರು ಗ್ರಾಮದಲ್ಲಿಯೇ ಬೀಡು ಬಿಟ್ಟಿದ್ದಾರೆ.

ಗ್ರಾಮ ಸ್ವರ್ಗ ಅಭಿಯಾನದ ಮೂಲಕ ಕುಗ್ರಾಮವನ್ನು ಸಕಲ ರೀತಿಯಲ್ಲೂ ಅಭಿವೃದ್ಧಿಪಡಿಸಲಾಗುತ್ತದೆ. ವ್ಯಸನ, ದ್ವೇಷ, ಅನಾರೋಗ್ಯ ಮುಕ್ತ ಮತ್ತು ಸ್ವಾವಲಂಬಿ ಸಮಾಜ ಕಟ್ಟುವ ಯೋಜನೆ ಹಾಕಿಕೊಂಡಿದೆ. ಆದ್ದರಿಂದ ಹನೂರು ತಾಲೂಕಿನ‌ ದೊಡ್ಡಾನೆಯನ್ನು ಯುವ ಬ್ರಿಗೇಡ್​ ತಂಡ ಆಯ್ಕೆ ಮಾಡಿಕೊಂಡಿದೆ.

ಯುವ ಬ್ರಿಗೇಡ್ ತಂಡ

ಬಾವಿ ಸ್ವಚ್ಛತೆ, ಮುಚ್ಚಿ ಹೋಗಿರುವ ಕಲ್ಯಾಣಿಗಳಿಗೆ ಪುನರ್ಜೀವ, ಸರ್ಕಾರಿ ಶಾಲೆಗೆ ಬಣ್ಣ ಹಚ್ಚುವುದೂ ಸೇರಿದಂತೆ ಗ್ರಾಮದಲ್ಲಿ ಕಂಡು ಬರುವ ಪ್ರತಿಯೊಂದು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲಿದ್ದಾರೆ. ಅಷ್ಟೇ ಅಲ್ಲದೆ ಕಾರ್ಯಕರ್ತೆ ಪ್ರಿಯಾ ಎಂಬುವವರು ಶಾಲೆಯಲ್ಲೇ ಉಳಿದು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಿಯಾ ಅವರ ವಾಸ್ತವ್ಯಕ್ಕೆ ಕೊಠಡಿ ಮತ್ತು ಶೌಚಾಲಯ ನಿರ್ಮಿಸಲಿದ್ದಾರೆ. ಗ್ರಾಮದಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಉದ್ದೇಶ ತಂಡದ್ದಾಗಿದೆ.

‌ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ನಮ್ಮ ಮತ್ತು ಗ್ರಾಮದ ಕಷ್ಟಗಳಿಗೆ ಜನಪ್ರತಿನಿಧಿಗಳು ಯಾರೂ ಕಿವಿಗೊಡುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ದೊಡ್ಡಾನೆಯ ಸುತ್ತಲೂ ಕಾಡು ಆವೃತ್ತವಾಗಿದೆ. ರಸ್ತೆಯಿಲ್ಲದೇ 8 ರಿಂದ 10 ಕಿ.ಮೀ. ಬೆಟ್ಟ-ಗುಡ್ಡ ಹತ್ತಿ ಮನೆ ತಲುಪಬೇಕಾದ ಪರಿಸ್ಥಿತಿ ಇದೆ. ಅಗತ್ಯ ಸರಕುಗಳಿಗಾಗಿ 15 ಕಿ.ಮೀ. ಕಾಡು ಹಾದಿ ಸವೆಸಬೇಕಿದೆ. ಇತ್ತೀಚೆಗಷ್ಟೆ ಜಿಲ್ಲಾ ಪಂಚಾಯಿತಿ ಸಿಇಒ, ಡಿಸಿ ಭೇಟಿ ನೀಡಿ ಶೀಘ್ರವೇ ರಸ್ತೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ABOUT THE AUTHOR

...view details