ಚಾಮರಾಜನಗರ :ಫೇಸ್ಬುಕ್ ಲೈವ್ನಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿ ಅದೃಷ್ಟವಶಾತ್ ಸಾರ್ವಜನಿಕ ಆಸ್ಪತ್ರೆಗೆ ಯುವಕ ದಾಖಲಾಗಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಆರೋಪ ಮಾಡಿರುವ ಯುವಕ ಮಾಡಿರುವ ವಿಡಿಯೋ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ಶಿವಮೂರ್ತಿ ಎಂಬಾತ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಯುವಕ. ಶಾಸಕ ನಿರಂಜನ್ ಕುಮಾರ್ ಕುಮ್ಮಕ್ಕಿನಿಂದ ಗುಂಡ್ಲುಪೇಟೆ ಸಿಪಿಐ ಮಹಾದೇವಸ್ವಾಮಿ ಹಾಗೂ ಪಿಎಸ್ಐ ಲತೇಶ್ ಕುಮಾರ್ ತನಗೆ ದೈಹಿಕ ಹಲ್ಲೆ ನಡೆಸಿದಲ್ಲದೇ ಜೇಬಿನಲ್ಲಿದ್ದ ಒಂದು ಲಕ್ಷ ರೂ.ಗಳನ್ನು ಕಸಿದುಕೊಂಡು ಬೆದರಿಕೆ ಹಾಕಿದ್ದಾರೆ ಎಂದು ಶಿವಮೂರ್ತಿ ಫೇಸ್ಬುಕ್ ಲೈವ್ ಮೂಲಕ ಗಂಭೀರ ಆರೋಪ ಮಾಡಿದ್ದಾನೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಮಧ್ಯರಾತ್ರಿಯಲ್ಲೆಲ್ಲ ಬೇರೆಯವರ ಮನೆಗೆ ಹೋಗುತ್ತಾರೆ ಎಂದು ಬಿಜೆಪಿ ಕಾರ್ಯಕರ್ತನೂ ಆಗಿರುವ ಶಿವಮೂರ್ತಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದನು. ಬಿಜೆಪಿ ಶಾಸಕ ನಿರಂಜನ್ ಕುಮಾರ್ ಉದ್ದೇಶಿಸಿಯೇ ಹೇಳಿದ್ದಾನೆ ಎಂದು ಮತ್ತೋರ್ವ ಬಿಜೆಪಿ ಕಾರ್ಯಕರ್ತ ಆನಂದ್ ಎಂಬಾತ ವಿರುದ್ಧ ದೂರು ನೀಡಿದ್ದ. ಈ ಸಂಬಂಧ ಗುಂಡ್ಲುಪೇಟೆ ಪಿಎಸ್ಐ ಲತೇಶ್ ಕುಮಾರ್ ಶಿವಮೂರ್ತಿಯನ್ನು ಠಾಣೆಗೆ ಕರೆಸಿ ಹೊಡೆದು, ಜೇಬಿನಲ್ಲಿದ್ದ 1 ಲಕ್ಷ ಹಣವನ್ನು ತೆಗೆದುಕೊಂಡು ರೌಡಿಶೀಟರ್ ತೆರೆಯುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾನೆ.
ಆತ್ಮಹತ್ಯೆ ಬೆದರಿಕೆ ಹಾಕಿ ಕಣ್ಮರೆಯಾಗಿದ್ದ ಯುವಕನನ್ನು ಸ್ಥಳೀಯರು ಪತ್ತೆಹಚ್ಚಿ ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದು, ಕೆಲ ಮಾತ್ರೆಗಳನ್ನು ಸೇವಿಸಿದ್ದ ಎಂದು ತಿಳಿದು ಬಂದಿದೆ.