ಕೊಳ್ಳೇಗಾಲ:ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದ ಯುವಕನೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಕುಡಿದ ಅಮಲಿನಲ್ಲಿ ನೇಣಿಗೆ ಶರಣಾದ ಯುವಕ - Kollegala crime latest news
ಮದ್ಯ ವ್ಯಸನಿಯಾಗಿದ್ದ ಯುವಕನೋರ್ವ ಕುಡಿದ ಅಮಲಿನಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
Suicide
ಪಟ್ಟಣದ ಚಿಕ್ಕನಾಯಕರ ಬೀದಿ ನಿವಾಸಿ ಸಂತೋಷ (22) ಮೃತ ಯುವಕ. ಮದ್ಯ ವ್ಯಸನಿಯಾಗಿದ್ದ ಯುವಕ ಇಡೀ ದಿನ ಮದ್ಯ ಕುಡಿಯುತ್ತಿದ್ದನಂತೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕುಡಿದ ಅಮಲಿಮಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಮೃತದೇಹವನ್ನು ನೀಡಲಾಗಿದೆ.