ಕರ್ನಾಟಕ

karnataka

ETV Bharat / state

ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ‌, ಬೈಕ್ ಬಿಟ್ಟು ಪರಾರಿಯಾದ ಯುವಕನ ಬಂಧನ - ಯಳಂದೂರು ತಾಲೂಕಿನಲ್ಲಿ ಅತ್ಯಾಚಾರ ಆರೋಪಿ ಬಂಧನ

ದನ ಮೇಯಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬಳಿಕ ಪರಾರಿಯಾಗಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ‌.

youth-arrested-on-charges-of-attempt-to-rape
ಅತ್ಯಾಚಾರಕ್ಕೆ ಯತ್ನಿಸಿ‌ ಬೈಕ್ ಬಿಟ್ಟು ಪರಾರಿಯಾದ ಯುವಕನ ಬಂಧನ

By

Published : Jun 15, 2022, 10:21 AM IST

ಚಾಮರಾಜನಗರ:ದನ ಮೇಯಿಸುತ್ತಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಬಳಿಕ ಪರಾರಿಯಾಗಿದ್ದ ಯುವಕನನ್ನು ಯಳಂದೂರು ಪೊಲೀಸರು ಬಂಧಿಸಿದ್ದಾರೆ‌. ಯಳಂದೂರು ತಾಲೂಕಿನ ಚಾಟಿಪುರ ಗ್ರಾಮದ ಪ್ರವೀಣ್(22) ಬಂಧಿತ ಆರೋಪಿಯಾಗಿದ್ದಾನೆ.

ಸೋಮವಾರ ಬೆಳಗ್ಗೆ ಚಾಟಿಪುರದಿಂದ ಈತ ಬೈಕಿನಲ್ಲಿ ಮಸಣಪುರದತ್ತ ಹೋಗುತ್ತಿದ್ದಾಗ ಇರಸವಾಡಿ ಬಳಿ ದನ ಮೇಯಿಸುತ್ತಿದ್ದ 21 ವರ್ಷದ ಯುವತಿಯೊಬ್ಬಳನ್ನು ನೋಡಿದ್ದಾನೆ. 500 ರೂ. ತೋರಿಸಿ ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸಿದಾಗ ಯುವತಿ ಜೋರು ಮಾತುಗಳಿಂದ ದಬಾಯಿಸಿದ್ದಾರೆ.

ಇದರಿಂದ ಕುಪಿತಗೊಂಡ ಪ್ರವೀಣ್ ಆಕೆಯನ್ನು ಎಳೆದಾಡಿ, ಕೆರೆಯ ಬಳಿ ಹೊತ್ತೊಯ್ದಿದ್ದಾನೆ. ಆದರೆ, ಯುವತಿ ಕೂಗಿಕೊಂಡಿದ್ದರಿಂದ ದಾರಿಹೋಕರು ಬಂದಿದ್ದು, ಯುವಕ ಬೈಕ್ ಬಿಟ್ಟು ಪರಾರಿಯಾಗಿದ್ದ. ಈ ಸಂಬಂಧ ಯುವತಿ ಯಳಂದೂರು ಪೊಲೀಸರಿಗೆ ದೂರು ನೀಡಿದ್ದಳು. ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪಿಸಿದ್ದಾರೆ. ಯಳಂದೂರು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕುಡಿದ ಅಮಲಿನಲ್ಲಿ ಛಾವಣಿ ಮೇಲಿಂದ ಬಿದ್ದು ಸಾವನ್ನಪ್ಪಿದ : ವಿಡಿಯೋ..

ABOUT THE AUTHOR

...view details