ಕರ್ನಾಟಕ

karnataka

ETV Bharat / state

ಯುವತಿ ಸಾವಿನ ವಿಚಾರ ಮುಚ್ಚಿಟ್ಟಿದ್ದಕ್ಕೆ ಪಾಲಕರ ವಿರುದ್ಧ ಪ್ರಕರಣ - ನಿಗೂಢವಾಗಿ ಮೃತಪಟ್ಟ ಸುಮಿತ್ರಾ ಎಂಬ ಯುವತಿ

ಚಾಮರಾಜನಗರ ತಾಲೂಕಿನ ಕಾಗಲವಾಡಿಮೋಳೆ ಗ್ರಾಮದಲ್ಲಿ ಯುವತಿಯೊಬ್ಬಳು ಮರ್ಯಾದೆ ಹತ್ಯೆಗೀಡಾದ ಅನುಮಾನ ಇದೀಗ ವ್ಯಕ್ತವಾಗಿದೆ.

ಯುವತಿ ಮರ್ಯಾದೆ ಹತ್ಯೆ ಅನುಮಾನ
ಯುವತಿ ಮರ್ಯಾದೆ ಹತ್ಯೆ ಅನುಮಾನ

By

Published : Apr 28, 2022, 8:32 PM IST

ಚಾಮರಾಜನಗರ:ಯುವತಿಯೊಬ್ಬಳು ಮರ್ಯಾದೆ ಹತ್ಯೆಗೀಡಾದ ಅನುಮಾನ ಚಾಮರಾಜನಗರ ತಾಲೂಕಿನ ಕಾಗಲವಾಡಿಮೋಳೆ ಗ್ರಾಮದ ಜನರಲ್ಲಿ ಮೂಡಿದೆ. ಕಳೆದ 8 ದಿನಗಳ ಹಿಂದೆ ಗ್ರಾಮದ ಸುಮಿತ್ರಾ ಎಂಬಾಕೆ ನಿಗೂಢವಾಗಿ ಮೃತಪಟ್ಟಿದ್ದು, ಊರಿನವರೇ ದೇಹವನ್ನು ಹೂಳದೇ ಸುಟ್ಟಿದ್ದಾರೆ. ಸುಮಿತ್ರಾ ಅದೇ ಗ್ರಾಮದ ಸೋಮಶೇಖರ್ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ.

ಇವರ ಪ್ರೀತಿಗೆ ಮನೆಯವರ ವಿರೋಧವಿತ್ತು ಎಂದು ತಿಳಿದುಬಂದಿದೆ. ಆತ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಾಮರಾಜನಗರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತು ಚಾಮರಾಜನಗರ ಪೂರ್ವ ಠಾಣೆ ಪಿ​ಐ ಆನಂದ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಮರ್ಯಾದೆ ಹತ್ಯೆ ಆರೋಪವನ್ನು ಅಲ್ಲಗೆಳೆದಿದ್ದಾರೆ. ಮರ್ಯಾದೆ ಹತ್ಯೆಯಾಗಿಲ್ಲ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಾವಿನ ವಿಚಾರವನ್ನು ಪೊಲೀಸರಿಗೆ ತಿಳಿಸದಿದ್ದಕ್ಕೆ ಪಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಯುವಕ ಆತ್ಮಹತ್ಯೆ ಯತ್ನ ಸಂಬಂಧ ಮಾಹಿತಿ ಇಲ್ಲ. ಆ ಸಂಬಂಧ ಯಾವುದೇ ದೂರುಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಮಗಳಿಗೆ ಕಟ್ಟಿದ ಹೊಸ ಮನೆಗೆ 'ಶ್ರೀ ನರೇಂದ್ರ ಮೋದಿ ನಿಲಯ' ಎಂದು ಹೆಸರಿಟ್ಟ ಅಭಿಮಾನಿ

ABOUT THE AUTHOR

...view details