ಕೊಳ್ಳೇಗಾಲ: ಮನೆಯಲ್ಲಿದ್ದ ಮಗಳು ಇದ್ದಕ್ಕಿದಂತೆ ನಾಪತ್ತೆಯಾಗಿರುವುದಾಗಿ ಯುವತಿಯ ಅಪ್ಪ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಾಲ್ಲೂಕಿನ ಅರೇಪಾಳ್ಯ ಗ್ರಾಮದ ಗಂಗಾಧರ್ ಎಂಬಾವರ ಮಗಳು ರಶ್ಮಿ (20) ಕಾಣೆಯಾದ ಯುವತಿ. ಆ.29 ರಂದು ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ದು ಇಂದು ಬೆಳಿಗ್ಗೆ ಎದ್ದು ನೋಡಿದಾಗ ಕಾಣೆಯಾಗಿದ್ದಳು. ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಎಲ್ಲೂ ಸಿಗದೆ ಇರುವುದರಿಂದ ಆಕೆಯನ್ನು ಪತ್ತೆ ಮಾಡಿಕೊಡುವಂತೆ ಗಂಗಾಧರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.