ಕೊಳ್ಳೇಗಾಲ: ಮೀನು ಹಿಡಿಯಲೆಂದು ಗೆಳೆಯರಿಬ್ಬರು ತೆರಳಿದ್ದು, ಈ ವೇಳೆ ದೋಣಿ ಮುಳುಗಿ ಓರ್ವ ಯುವಕ ನಾಪತ್ತೆಯಾದ ಘಟನೆ ಶಿವನ ಸಮುದ್ರದ ಬಳಿ ನಡೆದಿದೆ. ಸತ್ತೇಗಾಲ ಸಮೀಪದ ಶಿವನ ಸಮುದ್ರ ಗ್ರಾಮದ ಶಾಂತರಾಜು ಎಂಬುವವರ ಪುತ್ರ ವರುಣ್ (21) ನಾಪತ್ತೆಯಾಗಿದ್ದಾನೆ.
ವರುಣ್ ಅದೇ ಗ್ರಾಮದ ತನ್ನ ಸ್ನೇಹಿತ ರವಿ ಜೊತೆ ಅಕ್ಟೋಬರ್ 25ರಂದು ಶಿವನಸಮುದ್ರ ಮಾರಮ್ಮನ ದೇವಾಲಯದ ಹಿಂದೆ ಹರಿಯುವ ಕಾವೇರಿ ನದಿಗೆ ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ದೋಣೆ ಮಗುಚಿ ಸ್ನೇಹಿತರಿಬ್ಬರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಇಬ್ಬರೂ ಈಜಲು ಮುಂದಾಗಿದ್ದಾರೆ. ಆದ್ರೆ ವರುಣ್ ಈಜಲಾಗದೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಸ್ನೇಹಿತ ರವಿ ನೀರಿನಲ್ಲಿ ಈಜಿ ದಡ ಸೇರಿದ್ದಾನೆ.