ಕೊಳ್ಳೇಗಾಲ: ಅಪ್ರಾಪ್ತೆಗೆ ಪ್ರೀತಿ - ಪ್ರೇಮದ ಹೆಸರಿನಲ್ಲಿ ತಲೆ ಕೆಡಿಸಿ 18 ವರ್ಷದ ಬಳಿಕ ಮದುವೆಯಾಗುತ್ತೇನೆ ಎಂದು ನಂಬಿಸಿ ನಾಪತ್ತೆಯಾಗಿದ್ದ ಯುವಕನನ್ನು ಬಂಧಿಸಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ. ತಾಲೂಕಿನ ಮುಳ್ಳೂರು ಗ್ರಾಮದ ಅಪ್ಪು ಮಹೇಶ್ ಬಂಧಿತ ಆರೋಪಿ. ಎರಡು ವರ್ಷದ ಹಿಂದೆ ಬಾಲಕಿಯು ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಹಿಂದೆ ಬಿದ್ದು ಪ್ರೀತಿ ಪ್ರೇಮ ಎಂದು ಪುಸಲಾಯಿಸಿ, ಸುತ್ತಾಡಿದ್ದನಂತೆ.
ಅಪ್ರಾಪ್ತೆಗೆ ಪ್ರೀತಿ - ಪ್ರೇಮದ ಹೆಸರಲ್ಲಿ ವಂಚಿಸಿ ನಾಪತ್ತೆಯಾಗಿದ್ದ ಯುವಕನ ಬಂಧನ - Chamarajanagar latest crime news
ಅಪ್ರಾಪ್ತೆಗೆ ಮದುವೆಯಾಗುವುದಾಗಿ ನಂಬಿಸಿ ನಾಪತ್ತೆಯಾಗಿದ್ದ ಯುವಕನನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ಅಪ್ಪು ಮಹೇಶ್ ಬಂಧಿತ ಆರೋಪಿ
ಅಲ್ಲದೇ, 18 ವರ್ಷದ ಬಳಿಕ ಮದುವೆಯಾಗುವುದಾಗಿ ನಂಬಿಸಿ ನಾಪತ್ತೆಯಾಗಿದ್ದ. ಪ್ರಿಯಕರ ಅಪ್ಪು ಮಹೇಶ್ ವಿರುದ್ಧ ಅಪ್ರಾಪ್ತೆ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆ ಪಿಎಸ್ಐ ಮಂಜುನಾಥ್ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಧಾರವಾಡ: ಕಾಟನ್ ಮಿಲ್ನಲ್ಲಿ ಭಾರಿ ಅಗ್ನಿ ಅವಘಡ- ಕೋಟ್ಯಂತರ ರೂ. ಮೌಲ್ಯದ ಹತ್ತಿ ಬೆಂಕಿಗಾಹುತಿ!