ಚಾಮರಾಜನಗರ: ಎರಡು ವರ್ಷ ಪ್ರೀತಿಯ ನಾಟಕವಾಡಿ, ಕೊನೆಗೆ ಮದುವೆಯಾಗುವುದಾಗಿ ನಂಬಿಸಿ ಇನ್ನೇನು ನೋಂದಣಾಧಿಕಾರಿ ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲೇ ಯುವಕ ನಾಪತ್ತೆಯಾಗಿರುವ ಘಟನೆ ಹನೂರು ತಾಲೂಕಿನ ರಾಮಾಪುರದಲ್ಲಿ ಬೆಳಕಿಗೆ ಬಂದಿದೆ.
ಹನೂರು ತಾಲೂಕಿನ ಗ್ರಾಮವೊಂದರ 20 ವರ್ಷದ ಯುವತಿ ಮೋಸ ಹೋಗಿದ್ದಾಳೆ. ಪೊನ್ನಾಚಿ ಗ್ರಾಮದ ಪರಂಜ್ಯೋತಿ(25) ಎಂಬ ಯುವಕ ಯುವತಿಗೆ ಕೈಕೊಟ್ಟು ಪರಾರಿಯಾದ ಪ್ರಿಯಕರ. ಇಬ್ಬರು ಪ್ರೇಮಿಗಳಾಗಿ ಎರಡು ವರ್ಷ ಕಾಲ ಕಳೆದಿದ್ದಾರೆ.