ಚಾಮರಾಜನಗರ : ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿಗೆ ಪಂಕ್ತಿ ಸೇವೆಗೆ ಬಂದಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ಮಳವಳ್ಳಿ ತಾಲೂಕಿನ ಲಿಂಗಪಟ್ಟಣ ಎಂಬ ಗ್ರಾಮದ ಸುನೀಲ್(26) ಹಾಗೂ ಚಂದ್ರು(19) ಮೃತರು.
ಲಿಂಗಪಟ್ಟಣ ಗ್ರಾಮದ 30 ಜನರ ತಂಡದೊಟ್ಟಿಗೆ ಪಂಕ್ತಿ ಸೇವೆಗೆ ಬಂದಿದ್ದ ಈ ಇಬ್ಬರು ಯುವಕರು ದೇವರ ದರ್ಶನ ಪಡೆದು ಪಂಕ್ತಿ ಸೇವೆ ತಡ ಎಂದಿದ್ದಕ್ಕೇ ಹೊಸಮಠದ ಮುಂಭಾಗವಿರುವ ಚೆಕ್ ಡ್ಯಾಂಗೆ ಈಜಲು ತೆರಳಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ.