ಕೊಳ್ಳೇಗಾಲ(ಚಾಮರಾಜನಗರ): ರಸ್ತೆಯಲ್ಲಿ ತಾಯಿ-ಮಗಳು ನಡೆದುಕೊಂಡು ಬರುತ್ತಿದ್ದಾಗ ಯುವಕನೋರ್ವ ಒಳಉಡುಪು ಬಿಚ್ಚಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ನಡೆದಿದೆ. ಹೊಸಮಾಲಂಗಿ ಗ್ರಾಮದ 17 ವರ್ಷದ ಯುವತಿ ಮತ್ತು ಆಕೆಯ ತಾಯಿಗೆ ಅದೇ ಗ್ರಾಮದ ರಕ್ಷಿತ್(28) ಎಂಬಾತ ಅನುಚಿತ ವರ್ತನೆ ತೋರಿ ಜೈಲು ಪಾಲಾಗಿದ್ದಾನೆ.
ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ-ಮಗಳಿಗೆ ಗುಪ್ತಾಂಗ ತೋರಿಸಿದ ಯುವಕ ಅರೆಸ್ಟ್ - ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ ಮಗಳಿಗೆ ಗುಪ್ತಾಂಗ ತೋರಿಸಿದ ಯುವಕನ ಬಂಧನ
ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದಲ್ಲಿ ಯುವಕನೊಬ್ಬ ಗುಪ್ತಾಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಈ ಕೃತ್ಯ ಎಸಗಿದಕ್ಕೆ ಪೊಲೀಸರು ಯುವಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
![ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ-ಮಗಳಿಗೆ ಗುಪ್ತಾಂಗ ತೋರಿಸಿದ ಯುವಕ ಅರೆಸ್ಟ್ young man arrested for miss behavior in front of mother daughter in Kollegal](https://etvbharatimages.akamaized.net/etvbharat/prod-images/768-512-15428122-thumbnail-3x2-bng.jpeg)
ರಸ್ತೆಯಲ್ಲಿ ನಡೆದು ಬರುತ್ತಿದ್ದ ತಾಯಿ ಮಗಳಿಗೆ ಗುಪ್ತಾಂಗ ತೋರಿಸಿದ ಯುವಕನ ಬಂಧನ
ಈ ಸಂಬಂಧ ಸಂತ್ರಸ್ತರು ಕೊಟ್ಟ ದೂರಿನ ಮೇರೆಗೆ ಮಾಂಬಳ್ಳಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ:ವಿವಾಹಕ್ಕೆ ನಿರಾಕರಣೆ: 9 ವರ್ಷದಿಂದ ಪ್ರೀತಿಸುತ್ತಿದ್ದ ಯುವಕ ಆತ್ಮಹತ್ಯೆ