ಕರ್ನಾಟಕ

karnataka

ETV Bharat / state

ಬೈಕ್​ ಬಸ್​ ಮಧ್ಯೆ ಅಪಘಾತ: ನವವಿವಾಹಿತೆ ಸೇರಿ ಇಬ್ಬರ ದುರ್ಮರಣ - ಚಾಮರಾಜನಗರ ಅಪಘಾತ ಸುದ್ದಿ

ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.

ಬಸ್- ಬೈಕ್ ಮುಖಾಮುಖಿ
ಬಸ್- ಬೈಕ್ ಮುಖಾಮುಖಿ

By

Published : Dec 4, 2019, 9:10 PM IST

ಚಾಮರಾಜನಗರ:ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.

ಬೆಂಡಗಳ್ಳಿ ಗ್ರಾಮದ ನವವಿವಾಹಿತೆ ಕಾವ್ಯ(20) ಹಾಗೂ ಕಾವ್ಯಳ ಸಂಬಂಧಿ ಮಹೇಶ್​(30) ಮೃತಪಟ್ಟವರು, ಮೃತಳ ಪತಿ ರಾಜ್​ಕುಮಾರ್(28) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.

ಬೆಂಡಗಳ್ಳಿಯಿಂದ ಬೀಗರ ಔತಣ ಕೂಟ ಮುಗಿಸಿ ಗುಂಡ್ಲುಪೇಟೆಗೆ ತ್ರಿಬಲ್ ರೈಡಿಂಗ್​​ನಲ್ಲಿ ಬರುತ್ತಿದ್ದಾಗ ಬೈಕ್​ಗೆ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details