ಚಾಮರಾಜನಗರ:ರಾಜ್ಯ ಬಜೆಟ್ ಬಗ್ಗೆ ಜಿಲ್ಲೆಯ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿಎಂ ಯಡಿಯೂರಪ್ಪ ಜನರ ಮೊಗದಲ್ಲಿ ಮಂದಹಾಸ ಮೂಡಿಸಲಿದ್ದಾರೆ ಎಂಬ ವಿಶ್ವಾಸ ಜನರದ್ದಾಗಿದ್ದು, ಭರಪೂರ ಯೋಜನೆಯ ಆಸೆಗಣ್ಣಿದೆ.
ನಮ್ಮ ಬಜೆಟ್: ಚಾಮರಾಜನಗರದ ಜನರಲ್ಲಿ ಮಂದಹಾಸ ಮೂಡಿಸುವರೇ ಯಡಿಯೂರಪ್ಪ? - ಸಿಎಂ ಯಡಿಯೂರಪ್ಪ ಬಜೆಟ್ 2020
ರಾಜ್ಯ ಬಜೆಟ್ ಬಗ್ಗೆ ಚಾಮರಾಜನಗರ ಜಿಲ್ಲೆಯ ಜನತೆಯಲ್ಲಿ ಅಪಾರ ನಿರೀಕ್ಷೆಯಿದೆ. ಬಿ.ಎಸ್.ಯಡಿಯೂರಪ್ಪ ಈ ಬಾರಿ ನಮ್ಮ ಮೊಗದಲ್ಲಿ ಮಂದಹಾಸ ಮೂಡಿಸಲಿದ್ದಾರೆ ಎಂಬ ವಿಶ್ವಾಸ ಅವರದ್ದು.
![ನಮ್ಮ ಬಜೆಟ್: ಚಾಮರಾಜನಗರದ ಜನರಲ್ಲಿ ಮಂದಹಾಸ ಮೂಡಿಸುವರೇ ಯಡಿಯೂರಪ್ಪ? Budget expectations of chamarajanagar people](https://etvbharatimages.akamaized.net/etvbharat/prod-images/768-512-6294898-thumbnail-3x2-cnr.jpg)
ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ 2020
ಜನರ ನಿರೀಕ್ಷೆ, ಬೇಡಿಕೆಗಳು ಹೀಗಿವೆ:
- ಬಹುದಿನದ ಬೇಡಿಕೆಯಾದ ಟೊಮೇಟೊ, ಬಾಳೆ ಸಂಸ್ಕರಣ ಘಟಕ, ಎರಡನೇ ಹಂತದ ಕಬಿನಿ ಕುಡಿಯುವ ನೀರು ಯೋಜನೆ, ಪ್ರವಾಸೋದ್ಯಮಕ್ಕೆ ಉತ್ತೇಜನ.
- ಗಡಿ ಭಾಗದಲ್ಲಿ ಕನ್ನಡ ಭವನ ನಿರ್ಮಿಸಬೇಕೆಂಬ ಬೇಡಿಕೆ, ಉಪನಗರ ನಿರ್ಮಾಣ, ಅರಿಶಿಣಪುಡಿ ತಯಾರಿಕಾ ಘಟಕ ಸ್ಥಾಪನೆಗೆ ಅನುದಾನ ಸಿಗುವ ನಿರೀಕ್ಷೆ.
- ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆ.
- ಬಂಡೀಪುರ, ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟ, ಹೊಗೆನಕಲ್ ಪ್ರವಾಸಿ ಕೇಂದ್ರಗಳ ಅಭಿವೃದ್ಧಿ.
- ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆ
- ಕೊಳ್ಳೇಗಾಲ ಹಾಗೂ ಹನೂರು ತಾಲೂಕಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ.
- ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು. ನೂತನ ಆಸ್ಪತ್ರೆಗಳ ನಿರ್ಮಾಣಕ್ಕೆ ಅನುದಾನ.
- ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಿಗಳನ್ನು ಆಕರ್ಷಿಸಲು ಹೊಸ ಯೋಜನೆ.
ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಹಾಗೂ ಹೊಸ ಯೋಜನೆಗಳು ಘೋಷಣೆಯಾದರೆ ಜಿಲ್ಲೆಗೆ ಆದ್ಯತೆ ಕೊಡುವರೆಂಬ ನಂಬಿಕೆ ಜನರದ್ದಾಗಿದೆ. ನಾಳಿನ ಬಜೆಟ್ನಲ್ಲಿ ಗಡಿಜಿಲ್ಲೆ ಜನರಿಗೆ ಸಕ್ಕರೆ ನೀಡುವರೇ ಇಲ್ಲಾ ಮೂಗಿಗೆ ತುಪ್ಪ ಸವರುವರೇ? ಎಂಬುದನ್ನು ನೋಡಬೇಕು.