ಚಾಮರಾಜನಗರ:ಪ್ರಸಿದ್ಧ ತೀರ್ಥಕ್ಷೇತ್ರವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಇಂದು ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸ್ನೇಹಿತರೊಡಗೂಡಿ ತೆರಳಿ ದೇವರ ದರ್ಶನ ಪಡೆದರು.
ಪಾದಯಾತ್ರೆ ಮೂಲಕ ನಾಗಮಲೆ ಮಾದಪ್ಪನ ದರ್ಶನ ಪಡೆದ ಡಾ. ಯತೀಂದ್ರ ಸಿದ್ದರಾಮಯ್ಯ - ಮಾದಪ್ಪನ ದರ್ಶನ ಪಡೆದ ಶಾಸಕ ಯತೀಂದ್ರ ಸಿದ್ದರಾಮಯ್ಯ
ಪಾದಯಾತ್ರೆಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಾದೇಶ್ ಸಾಥ್ ನೀಡಿದರು..
ಯತೀಂದ್ರ ಸಿದ್ದರಾಮಯ್ಯ
ಬೆಳಗ್ಗೆ ಮಾದಪ್ಪನ ದರ್ಶನ ಪಡೆದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ನೇಹಿತರು ಬೆಟ್ಟದಿಂದಲೇ ಪಾದಯಾತ್ರೆ ಮೂಲಕ ನಾಗಮಲೆಗೆ ತೆರಳಿ ದೇವರ ದರ್ಶನ ಪಡೆದರು. ಪಾದಯಾತ್ರೆಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಾದೇಶ್ ಸಾಥ್ ನೀಡಿದರು.
ಯತೀಂದ್ರ ಸಿದ್ದರಾಮಯ್ಯ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಎಂದು ತಿಳಿದ ಭಕ್ತರು ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂತಸ ಪಟ್ಟರು, ಸೆಲ್ಫಿಗೆ ಮುಗಿಬಿದ್ದರು.