ಚಾಮರಾಜನಗರ:ಅರಿಕುಠಾರ ಎಂಬ ಊರು ಚಾಮರಾಜನಗರವಾಗಿ ಬದಲಾಗಿ 2 ಶತಮಾನಗಳಾಗಿರುವ ಹಿನ್ನೆಲೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ನಗರದ ಚಾಮರಾಜೇಶ್ವರ ದೇಗುಲಕ್ಕೆ ಭೇಟಿ ನೀಡಿದರು.
ಪೂರ್ವಜರ ಹುಟ್ಟೂರಿಗೆ ರಾಜವಂಶಸ್ಥ.. ಯದುವೀರ್‌ಗೆ ಅದ್ದೂರಿ ಸ್ವಾಗತ! - ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್
ಚಾಮರಾಜನಗರ ಜಿಲ್ಲೆಯ ಚಾಮರಾಜೇಶ್ವರ ದೇಗುಲಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಭೇಟಿ ನೀಡಿದ್ದಾರೆ.
ಚಾಮರಾಜನಗರಕ್ಕೆ ಯದುವೀರ್ ಭೇಟಿ
ಪೂರ್ವಜರು ಕಟ್ಟಿಸಿದ ಚಾಮರಾಜೇಶ್ವರ ದೇಗುಲ ಕಣ್ತುಂಬಿಕೊಂಡು ವಿಶೇಷ ಪೂಜೆ ಸಲ್ಲಿಸಿದರು. ಜಿಲ್ಲಾಡಳಿತ ಭವನದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ನಡೆಯುವ ಚಾಮರಾಜನಗರ ದ್ವಿಶತಮಾನೋತ್ಸವದ ಸಮಾರಂಭದಲ್ಲಿ ಅವರು ಭಾಗಿಯಾಗಲಿದ್ದಾರೆ.
ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರಕ್ಕೆ ಆಗಮಿಸಿರುವ ಯದುವಂಶದ ಕುಡಿಗೆ ಜಿಲ್ಲೆಯ ಜನರು ಅದ್ದೂರಿ ಸ್ವಾಗತ ಕೋರಿದರು. ಸತ್ತಿ-ಸೂರಿಪಾನಿ, ಕೊಂಬು ಕಹಳೆಯ ಸದ್ದಿನೊಂದಿಗೆ ಪೂರ್ಣಕುಂಭದೊಂದಿಗೆ ಆದರದಿಂದ ಬರಮಾಡಿಕೊಂಡರು.