ಕರ್ನಾಟಕ

karnataka

ETV Bharat / state

ಕೆಆರ್​ಎಸ್​​ ಬಿರುಕು ವಿಚಾರ: ರಾಜವಂಶಸ್ಥ ಯದುವೀರ್ ಹೇಳಿದ್ದಿಷ್ಟು..

ಕೃಷ್ಣರಾಜ ಸಾಗರ ಅಣೆಕಟ್ಟು​​ ಬಿರುಕು ಬಿಟ್ಟಿರುವ ಸಂಬಂಧ ಮಾಧ್ಯಮಗಳಲ್ಲಿ ಬಂದ ಮಾಹಿತಿಯಷ್ಟೇ ತಿಳಿದಿದೆ. ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ, ಅಣೆಕಟ್ಟು ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ನಿಲ್ಲಿಸಬೇಕು, ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅರಮನೆಗೆ ಮಾಹಿತಿ ಇಲ್ಲ ಎಂದು ಮೈಸೂರು ಯದುವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ತಿಳಿಸಿದರು.

yaduveer-krishnadatta-chamaraja-wadiyar
ರಾಜವಂಶಸ್ಥ ಯದುವೀರ್

By

Published : Jul 20, 2021, 8:46 PM IST

ಚಾಮರಾಜನಗರ: ಕೆಆರ್​​ಎಸ್​​ ಅಣೆಕಟ್ಟೆ ಬಿರುಕು ವಿಚಾರದ ಕುರಿತು ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಯಿಂದ ತಿಳಿದಿದೆ. ಈ ಕುರಿತು ಸರ್ಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಮೈಸೂರು ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕೆಆರ್​ಎಸ್​​ ಬಿರುಕು ವಿಚಾರ ಕುರಿತು ರಾಜವಂಶಸ್ಥ ಯದುವೀರ್ ಪ್ರತಿಕ್ರಿಯೆ

ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ ಎಂದು ತಿಳಿಸಿದರು.

ಅಣೆಕಟ್ಟು ಸಮೀಪ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ನಿಲ್ಲಿಸಬೇಕು, ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಅರಮನೆಗೆ ಮಾಹಿತಿ ಇಲ್ಲ. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಡ್ಯಾಂಗೆ ಸಮಸ್ಯೆಯಾದರೆ ಅಕ್ರಮ ಗಣಿಗಾರಿಗೆ ತಡೆಯಬೇಕು ಎಂದು ಹೇಳಿದರು.

ಮೈಸೂರು ಮಹಾ ಸಂಸ್ಥಾನದ ಯಾವುದೇ ಕೊಡುಗೆಯಾದರೂ ಅದು ಹಿಂದೆಯೂ ಉಪಯೋಗವಾಗಿದೆ, ಈಗಲೂ ಉಪಯುಕ್ತವಾಗುತ್ತಿದೆ. ಮುಂದೆಯೂ ಉಪಯುಕ್ತವಾಗಲಿ ಎನ್ನುವುದು ನಮ್ಮ ಅಭಿಲಾಷೆ. ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸರ್ಕಾರದ ಮೇಲೆ ನಂಬಿಕೆಯಿದೆ. ಕೆಆರ್‌ಎಸ್ ಡ್ಯಾಂ ಬಗ್ಗೆ ಸರ್ಕಾರ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details