ಚಾಮರಾಜನಗರ: ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಕೊಟ್ಟಿರುವುದು ಸಂವಿಧಾನದ ಮೂಲತತ್ವವನ್ನೇ ತಿರುಗು ಮುರುಗು ಮಾಡಿದೆ ಎಂದು ಕವಿ, ಸಾಹಿತಿ ಸಿದ್ದಲಿಂಗಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸಂವಿಧಾನದಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗಷ್ಟೇ ಮೀಸಲಾತಿ ಕೊಟ್ಟಿರುವುದು. ಅಸ್ಪೃಶ್ಯತೆ, ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಮೀಸಲಾತಿ ಕಲ್ಪನೆ ಹುಟ್ಟಿಕೊಂಡಿತು. ಈಗ ಎಲ್ಲರನ್ನೂ ಸೇರಿಸಿಕೊಂಡಿರುವುದರಿಂದ ಗೊಂದಲ ಉಂಟಾಗಿದೆ. ಕೇಂದ್ರ ಸರ್ಕಾರ ಏನು ಮಾಡುತ್ತದೆ ನೋಡಬೇಕು ಎಂದರು. ಇನ್ನು, ವಿವಿಧ ಜಾತಿಯ ಮಠಾಧೀಶರು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಬೀದಿಗಿಳಿದಿರುವುದು ಆಶ್ಚರ್ಯಕರ ಸಂಗತಿ. ಆಧ್ಯಾತ್ಮದಿಂದ ರಾಜಕಾರಣದತ್ತ ಬರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.