ಕರ್ನಾಟಕ

karnataka

ETV Bharat / state

ಮಾಹಿತಿ ಕೊರತೆ...ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಸಿಲುಕಿಕೊಂಡ ವಲಸೆ ಕಾರ್ಮಿಕರು - ವಲಸೆ ಕಾರ್ಮಿಕರು

ಬಂಡೀಪುರದ ಕೆಕ್ಕನಹಳ್ಳಿ ಚೆಕ್‍ಪೋಸ್ಟ್​​​ಗೆ ತೆರಳುವ ಬದಲಿಗೆ ಕೌದಳ್ಳಿ ಮಾರ್ಗವಾಗಿ ಬಂದ ತಮಿಳುನಾಡಿನ 57 ಕಾರ್ಮಿಕರು ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ.

workers-stuck-on-the-mahadeswara-hill-road
ವಲಸೆ ಕಾರ್ಮಿಕರು

By

Published : May 11, 2020, 8:40 PM IST

ಚಾಮರಾಜನಗರ: ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಮೂಲಕ ತಮಿಳುನಾಡಿನ ಸೇಲಂಗೆ ತೆರಳಬೇಕಿದ್ದ 57 ಕಾರ್ಮಿಕರು ಮಲೆಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಸಿಲುಕಿಕೊಂಡು ಅತಂತ್ರರಾಗಿದ್ದಾರೆ.

ಮಾಹಿತಿ ಕೊರತೆ ಹಿನ್ನೆಲೆ ಬಂಡೀಪುರದ ಕೆಕ್ಕನಹಳ್ಳಿ ಚೆಕ್‍ಪೋಸ್ಟ್​​​ಗೆ ತೆರಳುವ ಬದಲಿಗೆ ಕೌದಳ್ಳಿ ಮಾರ್ಗವಾಗಿ ಬಂದಿದ್ದಾರೆ. ಹೀಗಾಗಿ ಅಲ್ಲಿನ ಚೆಕ್‍ಪೋಸ್ಟ್​​​ನಲ್ಲಿ ಪ್ರವೇಶ ನಿರಾಕರಿಸಲಾಗಿದೆ.

ವಲಸೆ ಕಾರ್ಮಿಕರು

ಕೊಡಗು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆದು ಬಸ್​​​​​ನಲ್ಲಿ ಬಂದಿದ್ದರು. ಆದರೆ, ಗಡಿಯಲ್ಲಿ ಬಿಡದ ಕಾರಣ ಬಸ್ ಚಾಲಕ ಕಾರ್ಮಿಕರನ್ನು ಅಲ್ಲೇ ಬಿಟ್ಟು ತೆರಳಿದ್ದಾರೆ. ಈ ಕುರಿತು ಮಾಹಿತಿ ಪಡೆದ ಕೌದಳ್ಳಿ ಗ್ರಾಪಂ ಸಿಬ್ಬಂದಿ ಕಾರ್ಮಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ತಮಿಳುನಾಡಿನ‌ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಎರಡು ಬಸ್​​​ಗಳ‌ಲ್ಲಿ ಕಾರ್ಮಿಕರನ್ನು ತವರಿಗೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಗ್ರಾಪಂ ಪಿಡಿಒ ಪ್ರದೀಪ್ ತಿಳಿಸಿದ್ದಾರೆ.

ABOUT THE AUTHOR

...view details