ಕರ್ನಾಟಕ

karnataka

ETV Bharat / state

ಬಸ್​​ನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು: 8 ಕಿ.ಮೀ ಶವ ಹೊತ್ತೊಯ್ದ ಕುಟುಂಬಸ್ಥರು - ಶವ ಹೊತ್ತೊಯ್ದ ಕುಟುಂಬಸ್ಥರು

ಬಸ್​​​ನಲ್ಲಿ ವಾಂತಿ ಮಾಡುವ ವೇಳೆ ತಿರುವಿನಲ್ಲಿ ಆಯತಪ್ಪಿ ಬಿದ್ದು ಮಹಿಳೆ ಮೃತಪಟ್ಟಿದ್ದಾಳೆ. ಈ ಘಟನೆ ಸಂಬಂಧ ಕೆಎಸ್​ಆರ್​ಟಿಸಿ ಬಸ್ ಚಾಲಕ ಹಾಗೂ ಕಂಡಕ್ಟರ್​ ವಿರುದ್ಧ ದೂರು ದಾಖಲಾಗಿದೆ.

women-dies-from-falling-from-moving-bus
ಬಸ್​​ನಿಂದ ಆಯತಪ್ಪಿ ಬಿದ್ದು ಮಹಿಳೆ ಸಾವು..8 ಕಿ.ಮೀ ಶವ ಹೊತ್ತೊಯ್ದ ಕುಟುಂಬಸ್ಥರು

By

Published : Aug 6, 2021, 1:47 PM IST

ಚಾಮರಾಜನಗರ:ಬಸ್ಸಿನಿಂದ ಆಯತಪ್ಪಿ ಬಿದ್ದು ಮಹಿಳೆಯೋರ್ವಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ವಡಕೆಹಳ್ಳ ಬಳಿ ನಡೆದಿದೆ. ಮೃತ ಮಹಿಳೆಯನ್ನು ಹಳೆಯೂರು ಗ್ರಾಮದ ಕುಳ್ಳಮಾದಿ (50) ಎಂದು ಗುರುತಿಸಲಾಗಿದೆ.

ಮೃತ ಕುಳ್ಳಮಾದಿಯು ಮಹದೇಶ್ವರ ಬೆಟ್ಟದಿಂದ ಮೈಸೂರು ಹಾಗೂ ಕೆ.ಆರ್.ಪೇಟೆಯ ಮಾರ್ಗವಾಗಿ ಸಂಚರಿಸುವ ಕೆಎಸ್​​ಆರ್​ಟಿಸಿ ಬಸ್​​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಡೆಕೆಹಳ್ಳ ಸಮೀಪ ವಾಂತಿ ಬರುತ್ತಿರುವುದಾಗಿ ಕಂಡಕ್ಟರ್​​​​ಗೆ ತಿಳಿಸಿದ್ದಾಳೆ. ಹೀಗಾಗಿ ಹಿಂಬದಿಯ ಡೋರ್ ಬಳಿ ವಾಂತಿ ಮಾಡುವಂತೆ ತಿಳಿಸಿದ್ದಾರೆ. ಆದರೆ ಈ ವೇಳೆ ತಿರುವಿನಲ್ಲಿ ಆಯತಪ್ಪಿ ಬಸ್​​​ನಿಂದ ಬಿದ್ದು ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾರೆ‌.

ಬಳಿಕ ಬಸ್ ಚಾಲಕ, ಕಂಡಕ್ಟರ್ ಹಾಗೂ ಸಹ ಪ್ರಯಾಣಿಕರು ಸೇರಿ ಅದೇ ಬಸ್​​​​ನಲ್ಲಿ ಮೃತದೇಹವನ್ನು ಮಹದೇಶ್ವರಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಆದರೆ ಅಷ್ಟರಾಗಲೇ ಆಕೆ ಸಾವನಪ್ಪಿದ್ದಳು.

8 ಕಿ.ಮೀ ಶವ ಹೊತ್ತೊಯ್ದ ಸಂಬಂಧಿಕರು..

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 108 ವಾಹನವಿದ್ದರೂ ಚಾಲಕನಿಲ್ಲದಿರುವುದರಿಂದ, ಬೇರೆ ವಾಹನಗಳು ಸಿಗದೆ ಕುಟುಂಬಸ್ಥರು ಪರದಾಡಿದ್ದಾರೆ. ಬಳಿಕ ಸಂಬಂಧಿಕರೇ ಸೇರಿ ಹೆಗಲ ಮೇಲೆ ಮೃತದೇಹವನ್ನು 8 ಕಿ.ಮೀ ಹೊತ್ತೊಯ್ದಿದ್ದಾರೆ. ಇನ್ನು ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ:15 ವರ್ಷ ವಯಸ್ಸು ಮೇಲ್ಪಟ್ಟ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಅಲಹಾಬಾದ್ ಹೈಕೋರ್ಟ್​​​​

ABOUT THE AUTHOR

...view details