ಚಾಮರಾಜನಗರ: ಮಹಿಳೆಯೊಬ್ಬರಿಗೆ ಶೌಚಾಲಯದಲ್ಲಿ ಅಡಗಿದ್ದ ನಾಗರಹಾವು ಕಚ್ಚಿರುವ ಘಟನೆ ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ನಡೆದಿದೆ.
ಟಾಯ್ಲೆಟ್ ಕಮೋಡ್ನಲ್ಲಿತ್ತು ನಾಗರ... ಕಚ್ಚಿಸಿಕೊಂಡ ಮಹಿಳೆ ಸ್ಥಿತಿ ಗಂಭೀರ - ಕಚ್ಚಿ
ಇಂದು ಬೆಳ್ಳಂಬೆಳಗ್ಗೆ ನಾಗರ ಹಾವೊಂದು ಟಾಯ್ಲೆಟ್ ಕಮೋಡ್ನಲ್ಲಿ ಕುಳಿತಿತ್ತು. ಶೌಚಾಲಯಕ್ಕೆ ಹೋಗಿದ್ದ ಮಹಿಳೆಗೆ ಹಾವು ಕಚ್ಚಿದ್ದು, ಮಹಿಳೆ ಸ್ಥಿತಿ ಗಂಭೀರವಾಗಿದೆ.
ಟಾಯ್ಲೆಟ್ ಕಮೋಡ್ ನಲ್ಲಿ ಮಹಿಳೆಗೆ ಕಚ್ಚಿದ ಹಾವು
ಅಲ್ಲಮ್ಮ(50) ಹಾವಿನಿಂದ ಕಚ್ಚಿಸಿಕೊಂಡ ವೃದ್ಧೆ. ಸರ್ಕಾರ ನೀಡುವ ಅನುದಾನದಲ್ಲಿ ನಿರ್ಮಿಸಿದ್ದ ಶೌಚಗೃಹ ಬಳಸದೇ ಕಟ್ಟಿಗೆಗಳನ್ನು ತುಂಬಿದ್ದರು ಎಂದು ತಿಳಿದು ಬಂದಿದೆ. ಅಡಿಗೆಗೆ ಕಟ್ಟಿಗೆಗಳನ್ನು ತರಲು ಶೌಚಗೃಹಕ್ಕೆ ತೆರಳಿದ ವೇಳೆ ಕಮೋಡ್ ನಲ್ಲಿದ್ದ ಹಾವು ಕಚ್ಚಿದೆ. ಸದ್ಯ, ಅಲ್ಲಮ್ಮ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಹಾವಿರುವ ಮಾಹಿತಿ ಪಡೆದ ಉರಗ ಪ್ರೇಮಿ ಸ್ನೇಕ್ ಚಾಂಪ್ ಕಮೋಡ್ನಲ್ಲಿದ್ದ ಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.