ಕರ್ನಾಟಕ

karnataka

ETV Bharat / state

ಕೊಳ್ಳೇಗಾಲ: ಆಸ್ಪತ್ರೆಗೆಂದು‌‌ ಬಂದ ಗೃಹಿಣಿ ಮಗುವಿನೊಂದಿಗೆ ನಾಪತ್ತೆ! - woman missing in kollegala case

ನಾದಿನಿಯ ಜೊತೆ ಕೊಳ್ಳೇಗಾಲ ಪಟ್ಟಣದ ಆಸ್ಪತ್ರೆಗೆ ಬಂದಿದ್ದ ಗೃಹಿಣಿಯೋರ್ವಳು ಮೆಡಿಕಲ್​ಗೆಂದು ತೆರಳಿ ಬಳಿಕ ತನ್ನ ಮಗುವಿನೊಂದಿಗೆ ನಾಪತ್ತೆಯಾಗಿದ್ದಾಳೆ.

woman missing with her 2 years old child
2 ವರ್ಷದ ಮಗುವಿನೊಂದಿಗೆ ನಾಪತ್ತೆ

By

Published : Jan 2, 2021, 7:14 PM IST

ಕೊಳ್ಳೇಗಾಲ: ನಾದಿನಿಯ ಜೊತೆ ಆಸ್ಪತ್ರೆಗೆ ಬಂದಿದ್ದ ಗೃಹಣಿ ತನ್ನ ಮಗುವಿನದೊಂದಿಗೆ ನಾಪತ್ತೆಯಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಸತೀಶ ಎಂಬಾತನ ಪತ್ನಿ ಕಾವ್ಯ (24) ಹಾಗೂ ಎರಡು ವರ್ಷದ ಮಗು ಕಣ್ಮರೆಯಾಗಿದ್ದಾರೆ. ಪಟ್ಟಣದ ಆಸ್ಪತ್ರೆಗೆ ನನ್ನ ತಂಗಿ ರೇಖಾ ಜೊತೆ ಬಂದಿದ್ದ ನನ್ನ ಪತ್ನಿ ಕಾವ್ಯ ಹಾಗೂ ಎರಡು ವರ್ಷದ‌ ಮಗುವಿನ ಜೊತೆ ದತ್ತ ಮೆಡಿಕಲ್ ಬಳಿ ಕಾಣೆಯಾಗಿದ್ದಾಳೆ ಎಂದು ಆಕೆಯ ಗಂಡ ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ನಾಪತ್ತೆಯಾಗಿರುವ ತಾಯಿ-ಮಗುವಿನ ಪತ್ತೆಗೆ ಪೊಲೀಸರು ಕಾರ್ಯನಿರತರಾಗಿದ್ದಾರೆ.

ABOUT THE AUTHOR

...view details