ಚಾಮರಾಜನಗರ:ಶೌಚಾಲಯಕ್ಕೆ ಹೋಗಬೇಕೆಂದು ಹೇಳಿವೃದ್ಧೆಗೆ ಮಗು ಕೊಟ್ಟು ಮಹಿಳೆ ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ಇಂದು ನಡೆದಿದೆ. ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಕಲಿಗೌಡನಹಳ್ಳಿ ಗ್ರಾಮದ ಮಹಾದೇವಮ್ಮ ಎಂಬವರ ಬಳಿ ಬಂದ ಅಪರಿಚಿತ ಮಹಿಳೆ ತಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ, ಮಗು ನೋಡಿಕೊಳ್ಳಿ ಎಂದು ತಿಳಿಸಿ ಮಗು ಕೊಟ್ಟು ವಾಪಸ್ ಬರದೇ ಪರಾರಿಯಾಗಿದ್ದಾಳೆ. ಹೆಣ್ಣು ಮಗುವಾಗಿದ್ದು ಅಂದಾಜು 10 ತಿಂಗಳಿನಿಂದ ಒಂದೂವರೆ ವರ್ಷಗಳಾಗಿದೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆ ಠಾಣೆ ಪೊಲೀಸರು ಮಗುವನ್ನು ಸಿಡಬ್ಲೂಸಿ ಸುಪರ್ದಿಗೆ ವಹಿಸಿದ್ದು, ಪರಾರಿಯಾದ ಮಹಿಳೆ ಪತ್ತೆಗೆ ಮುಂದಾಗಿದ್ದಾರೆ.
ಸರಗಳವು- ಮಹಿಳೆ ಕಿವಿಗೆ ಗಾಯ:ಬೈಕಿನಲ್ಲಿ ಹೆಲ್ಮೆಟ್ ಮತ್ತು ಮಾಸ್ಕ್ ಧರಿಸಿ ಬಂದ ಮುಸುಕುಧಾರಿಗಳು ಮಹಿಳೆಯೊಬ್ಬರ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ವೀರನಪುರ-ಹೆಗ್ಗಡಹಳ್ಳಿ ಸಂಪರ್ಕ ರಸ್ತೆಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.