ಚಾಮರಾಜನಗರ:ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹನೂರು ಸಮೀಪದ ಬಂಡಳ್ಳಿಯಲ್ಲಿ ನಡೆದಿದೆ.
ಹೊಸ ಮನೆ ಕಟ್ಟುವ ಮೊದಲೇ ಬಂದ ಜವರಾಯ: ಹಳೆ ಮನೆ ಕುಸಿದು ಮಹಿಳೆ ಸಾವು
ಭಾರಿ ಮಳೆಗೆ ಮನೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾಳೆ. ಹೊಸ ಮನೆ ಕಟ್ಟಡ ನಿರ್ಮಾಣ ಹಂತದಲ್ಲಿರುವಾಗಲೇ ಹಳೆಯ ಮನೆ ಕುಸಿದು ರತ್ನಮ್ಮ ಮೃತಪಟ್ಟಿದ್ದಾಳೆ.
ಜಿಲ್ಲೆಯಲ್ಲಿ ಮನೆ ಕುಸಿದು ಮಹಿಳೆ ಸಾವು
ಜಿಲ್ಲೆಯ ಬಂಡಳ್ಳಿ ಗ್ರಾಮದ ನಂಜಪ್ಪಚಾರಿ ಪತ್ನಿ ರತ್ನಮ್ಮ ಮೃತಪಟ್ಟ ಮಹಿಳೆ. ಶುಕ್ರವಾರ ಸುರಿದ ಮಳೆಗೆ ಮಣ್ಣಿನ ಗೋಡೆ ಕುಸಿದು ಬಿದ್ದ ಪರಿಣಾಮ ರತ್ನಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹಳೆಯ ಮನೆ ಸಮೀಪವೇ ಹೊಸ ಮನೆಯೊಂದನ್ನು ಇವರು ಕಟ್ಟುತ್ತಿದ್ದರು ಎಂದು ತಿಳಿದುಬಂದಿದೆ. ಹೊಸಮನೆ ನಿರ್ಮಾಣಕ್ಕೂ ಮುನ್ನವೇ ವಿಧಿಯಾಟಕ್ಕೆ ರತ್ನಮ್ಮ ಬಲಿಯಾಗಿದ್ದಾರೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Aug 17, 2019, 2:12 PM IST