ಕೊಳ್ಳೇಗಾಲ(ಚಾಮರಾಜನಗರ):ಪತ್ನಿಯ ಶೀಲ ಶಂಕಿಸಿ ನಿತ್ಯ ಕುಡಿದು ಜಗಳವಾಡುತ್ತಿದ್ದ ಪತಿ ವರ್ತನೆಗೆ ಬೇಸತ್ತು ಗೃಹಿಣಿ ಆತ್ಮಹತ್ಯೆಗೆ ಶರಣಾದ ಘಟನೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಹಬ್ಬಿಹಳ್ಳ ಗ್ರಾಮದ ನಿವಾಸಿ ಮೀನಾಕ್ಷಿ(29) ಮೃತಪಟ್ಟ ದುರ್ದೈವಿ. ಈಕೆಯ ಪತಿ ಸಿದ್ದಪ್ಪ ಕುಂಬಾರ ಬಸ್ ಕಂಡಕ್ಟರ್ ಆಗಿದ್ದು, ಇಬ್ಬರೂ ಪಟ್ಟಣದ ಮಹದೇಶ್ವರ ಕಾಲೇಜಿನ ಸಮೀಪದ ಮನೆಯೊಂದರಲ್ಲಿ ವಾಸವಿದ್ದರು.