ಚಾಮರಾಜನಗರ: ಆನೆಯೊಂದು ಸಫಾರಿ ಜೀಪ್ ಅಟ್ಟಾಡಿಸಿಕೊಂಡು ಬಂದು ಪ್ರವಾಸಿಗರನ್ನು ಬೆಚ್ಚಿಬೀಳಿಸಿದ ಘಟನೆ ಚಾಮರಾಜನಗರ ತಾಲೂಕಿನ ಕೆ.ಗುಡಿಯ ಜಂಗಲ್ ಲಾಡ್ಜ್ನಲ್ಲಿ ಶುಕ್ರವಾರ ಸಂಜೆ ನಡೆದಿದೆ.
Watch video: ಜೀಪ್ ಅಟ್ಟಾಡಿಸಿಕೊಂಡು ಬಂದು ಸಫಾರಿಗರನ್ನ ಬೆಚ್ಚಿಬೀಳಿಸಿದ ಗಜರಾಜ - Chamarajanagar k gudi Wild Elephant video
ಶುಕ್ರವಾರ ಸಂಜೆ ಚಾಮರಾಜನಗರ ತಾಲೂಕಿನ ಕೆ.ಗುಡಿಯ ಆನೆಹಳ್ಳದ ಕೆರೆ ಎಂಬಲ್ಲಿ ಒಂಟಿ ಸಲಗವೊಂದು ಏಕಾಏಕಿ ನುಗ್ಗಿ ಬಂದು ಸಫಾರಿ ವಾಹನವನ್ನ ಹಿಂಬಾಲಿದ ಘಟನೆ ನಡೆದಿದೆ.
ಗಜರಾಜ
ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಕೆ.ಗುಡಿ ಸಫಾರಿಯಲ್ಲಿ ಆನೆ, ಹುಲಿಗಳ ದರ್ಶನ ಸಾಮಾನ್ಯವಾಗುತ್ತಿದೆ. ಅದರಂತೆ, ಶುಕ್ರವಾರ ಸಂಜೆ ವೇಳೆಗೆ ಆನೆಹಳ್ಳದ ಕೆರೆ ಎಂಬಲ್ಲಿ ಸಲಗವೊಂದು ನಿಂತಿತ್ತು. ಅತ್ತ ಕಡೆಯಿಂದ ಜೀಪ್ನಲ್ಲಿ ಬಂದ ಸಫಾರಿಗರು ಆನೆ ನೋಡಿ, ಎಂಜಾಯ್ ಮಾಡುತ್ತಿದ್ದ ವೇಳೆ ಏಕಾಏಕಿ ಸಫಾರಿ ವಾಹನದತ್ತ ಒಂಟಿ ಸಲಗ ನುಗ್ಗಿ ಬಂದಿದ್ದು, ಒಮ್ಮೆ ಸಫಾರಿಗರ ಎದೆ ನಡುಗಿಸಿದೆ.
ಇನ್ನು ಆನೆ ಅಟ್ಟಾಡಿಸಿಕೊಂಡು ಬರುತ್ತಿರುವುದನ್ನ ನೆಟ್ಟಿಗರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
TAGGED:
Elephant video viral