ಚಾಮರಾಜನಗರ :ಬೆಳೆ ತಿನ್ನಲು ಬಂದ ಕಾಡು ಹಂದಿಯನ್ನು ಚಿರತೆ ಬೇಟೆಯಾಡಿ ತಿಂದಿರುವ ಘಟನೆ ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ನಡೆದಿದೆ.
ಕುಲಗಾಣ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆ ತಿನ್ನಲು ಬಂದಿದ್ದ ಕಾಡು ಹಂದಿಯನ್ನು ಚಿರತೆಯೊಂದು ಬೇಟೆಯಾಡಿ ತೊಡೆ ಮಾಂಸವನ್ನಷ್ಟೇ ತಿಂದು ಪರಾರಿಯಾಗಿದೆ. ಇಂದು ಜಮೀನಿಗೆ ರೈತ ತೆರಳಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಚಿರತೆ ದಾಳಿಗೆ ಬಲಿಯಾದ ಕಾಡು ಹಂದಿ ಕಳೆದ 1 ತಿಂಗಳಿನಿಂದಲೂ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಮತ್ತು ಮಲೆಯೂರು ಭಾಗದಲ್ಲಿ ಹಾಡ ಹಗಲೇ ಚಿರತೆ ಸಂಚರಿಸುತ್ತಿದ್ದು, ರೈತರಿಗೆ ಭೀತಿ ಶುರುವಾಗಿದೆ. ಮಲೆಯೂರುಗುಡ್ಡದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಇತ್ತೀಚಿಗೆ ಪ್ರತಿ ದಿನ ಜಮೀನುಗಳಲ್ಲಿ ದರ್ಶನ ನೀಡುತ್ತಿದ್ದು, ರೈತರು ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ.
ಅರಣ್ಯ ಇಲಾಖೆ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಬೇಕೆಂದು ಹಿರೇಬೇಗೂರು ಗ್ರಾಮದ ಮಧು ಅಳಲು ತೋಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅರಳಿಕಟ್ಟೆ ಗ್ರಾಮದಲ್ಲಿ ಮಾದಪ್ಪ ಎಂಬುವರಿಗೆ ಸೇರಿದ ಕರುವಿನ ಮೇಲೆ ದಾಳಿ ನಡೆಸಿ ಚಿರತೆ ಪರಾರಿಯಾಗಿತ್ತು.