ಕರ್ನಾಟಕ

karnataka

ETV Bharat / state

ಕುರಿ ಕರುಳಲ್ಲಿ ಸಿಡಿಮದ್ದುಗಳನ್ನಿಟ್ಟು ಕಾಡುಹಂದಿ ಬೇಟೆ: ಬಾವ-ಬಾಮೈದುನ ಅರೆಸ್ಟ್‌ - ಭಾವ-ಬಾಮೈದುನ ಅಂದರ್

ಕಾಡು ಹಂದಿಗಳನ್ನು ಬೇಟೆಯಾಡುತ್ತಿದ್ದ ಆರೋಪಿಗಳು ರಂಜಕ, ಗಾಜಿನ ಚೂರನ್ನು ಕುರಿಯ ಕರಳಲ್ಲಿ ಉಂಡೆ ಮಾಡಿ ಕಾಡಂಚಿನಲ್ಲಿ ಇಡುತ್ತಿದ್ದರು ಎನ್ನಲಾಗಿದೆ.

ಭಾವ-ಬಾಮೈದುನ ಅಂದರ್

By

Published : Sep 12, 2019, 5:12 PM IST

ಚಾಮರಾಜನಗರ:ಕಾಡುಹಂದಿಗಳನ್ನು ಬೇಟೆಯಾಡಲು ಸಿಡಿಮದ್ದುಗಳನ್ನು ಇಡುತ್ತಿದ್ದ ವೇಳೆ ಇಬ್ಬರು ಬೇಟೆಗಾರರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಸಿಡಿಮದ್ದುಗಳು

ಕೊಳ್ಳೇಗಾಲದ ಮೋಳೆಯ ಚಿಕ್ಕಣ್ಣ-ಮಹಾದೇವ ಬಂಧಿತ ಆರೋಪಿಗಳು. ಬಾವ- ಬಾಮೈದುನರಾಗಿದ್ದ ಆರೋಪಿಗಳು ರಂಜಕ, ಗಾಜಿನ ಚೂರನ್ನು ಕುರಿಯ ಕರುಳಲ್ಲಿ ಉಂಡೆ ಮಾಡಿಟ್ಟು ಕಾಡಂಚಿನಲ್ಲಿ ಇಡುತ್ತಿದ್ದರು ಎನ್ನಲಾಗಿದೆ.

ಕುರಿ ಆಸೆಗೆ ಕಾಡುಹಂದಿಗಳು ಬಂದು ತಿನ್ನಲು ಬಾಯಿ ಹಾಕಿದ ವೇಳೆ ಸಿಡಿಮದ್ದು ಸಿಡಿದು ಅಸುನೀಗಿ ಸುಲಭವಾಗಿ ಕಾಡುಹಂದಿ ಮಾಂಸ ದಕ್ಕುತ್ತಿತ್ತು.

ಬಂಧಿತರಿಂದ 40 ಸಿಡಿಮದ್ದಿನ ಉಂಡೆಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ‌.

ಸಿಪಿಐ ಶ್ರೀಕಾಂತ್ ನೇತೃತ್ವದ ತಂಡ ಬೂದಿಗಟ್ಟಯ್ಯನ ದೊಡ್ಡಿರಸ್ತೆಯಲ್ಲಿ ಈ ಇಬ್ಬರನ್ನು ಬಂಧಿಸಿದೆ.

ABOUT THE AUTHOR

...view details