ಕರ್ನಾಟಕ

karnataka

ETV Bharat / state

ಕಾಡು ಪ್ರಾಣಿಗಳ ದಾಳಿಗೆ ಬಿಚ್ಚಿ ಬಿದ್ದ ಚಾಮರಾಜನಗರ ಜಿಲ್ಲೆ ಜನ - Elephant attack in Chamarajanagar

ಜಿಲ್ಲೆಯಲ್ಲಿ ಒಂದೆ ದಿನಕ್ಕೆ ವಿವಿಧೆಡೆ ಕಾಡು ಪ್ರಾಣಿಗಳ ಮಾರಣಾಂತಿಕ ದಾಳಿ ನಡೆದಿದ್ದು ಜನಗಳು ಭಯಭೀತರಾಗಿದ್ದಾರೆ, ಸದ್ಯ ಅರಣ್ಯ ಇಲಾಖೆಗೆ ಮನವಿ ಮಾಡಿರುವ ನಿವಾಸಿಗಳು ಕಾಡು ಪ್ರಾಣಿಗಳಿಂದ ರಕ್ಷಣೆ ಕೋರಿದ್ದಾರೆ.

ಕಾಡು ಪ್ರಾಣಿಗಳ ದಾಳಿಗೆ ಬಿಚ್ಚಿ ಬಿದ್ದ ಚಾಮರಾಜನಗರ ಜಿಲ್ಲೆ

By

Published : Aug 12, 2019, 11:45 PM IST

ಚಾಮರಾಜನಗರ : ಕೆಲವೇ ತಾಸುಗಳ ಅಂತರದಲ್ಲಿ ಜಿಲ್ಲೆಯ ವಿವಿಧೆಡೆ ಮಾನವ ಮತ್ತು ಪ್ರಾಣಿ ಸಂಘರ್ಷ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.

ಜಿಲ್ಲೆಯಲ್ಲಿ ಒಂದೆ ದಿನಕ್ಕೆ ವಿವಿಧೆಡೆ ಕಾಡು ಪ್ರಾಣಿಗಳ ಮಾರಣಾಂತಿಕ ದಾಳಿ ನಡೆದಿದ್ದು ಜನಗಳು ಭಯಭೀತರಾಗಿದ್ದಾರೆ, ಸದ್ಯ ಅರಣ್ಯ ಇಲಾಖೆಗೆ ಮನವಿ ಮಾಡಿರುವ ನಿವಾಸಿಗಳು ಕಾಡು ಪ್ರಾಣಿಗಳಿಂದ ರಕ್ಷಣೆ ಕೋರಿದ್ದಾರೆ.

ಚಿರತೆ ದಾಳಿ

ಯಳಂದೂರು ತಾಲೂಕು ಮೆಲ್ಲಹಳ್ಳಿ ಗೇಟ್ ಬಳಿಯ ಶಾಂತರಾಜು ಎಂಬವರ ತೋಟದ ಮನೆಗೆ ದಾಳಿ ಮಾಡಿ ಸಾಕಿದ ಎರಡು ನಾಯಿಗಳ ಪೈಕಿ ಒಂದು ನಾಯಿಯನ್ನು ಎಳೆದೊಯ್ದಿದೆ‌. ಚಿರತೆ ಕಂಡು ಮನೆಯವರು ಕೂಗಿದಾಗ ನಾಯಿ ಹೊತ್ತು ಪರಾರಿಯಾಗಿದೆ. ಕಬ್ಬಿನ ಗದ್ದೆಯಲ್ಲಿ ಇರಬಹುದೆಂದು ಶಂಕಿಸಲಾಗಿದ್ದು ರೈತರು ಆತಂಕಕ್ಕೀಡಾಗಿದ್ದಾರೆ ಆದಷ್ಟು ಬೇಗ ಅರಣ್ಯ ಇಲಾಖೆಯವರು ಚಿರತೆಯನ್ನು ಕಾಡಿಗೆ ಅಟ್ಟಬೇಕು ಎಂದು ರೈತ ಮುಖಂಡ ಸುಭಾಷ್ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ಹುಲಿ ದಾಳಿ

ದನ ಮೇಯಿಸಲು ತೆರಳಿದ್ದ ದನಗಾಹಿ ಮೇಲೆ ಹುಲಿಯೊಂದು ದಾಳಿ ನಡೆಸಿರುವ ಘಟನೆ ತೆರಕಣಾಂಬಿ ಸಮೀಪದ ಚಿರಕನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಚಿಕ್ಕಸಿದ್ದಯ್ಯ(45) ಎಂಬಾತ ತೀವ್ರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ, ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತೆರಕಣಾಂಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಘಟನೆ ನಡೆದ ಜಾಗ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕರೆ ವಲಯಕ್ಕೆ ಸೇರಲಿದೆ.

ಕಾಡು ಪ್ರಾಣಿಗಳ ದಾಳಿಗೆ ಬಿಚ್ಚಿ ಬಿದ್ದ ಚಾಮರಾಜನಗರ ಜಿಲ್ಲೆ

ಚಾಮರಾಜನಗರಕ್ಕೆ ಆನೆ ಲಗ್ಗೆ

ಜಿಲ್ಲಾಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಕರಿವರದರಾಜನ ಬೆಟ್ಟ ಸಮೀಪ ಎರಡು ಆನೆಗಳು ಲಗ್ಗೆ ಇಟ್ಟು ನಗರದ ಜನ ಆತಂಕಕ್ಕೀಡು ಮಾಡಿದೆ. ಬೆಟ್ಟಕ್ಕೆ ಸಮೀಪವೇ ಮೆಡಿಕಲ್ ಕಾಲೇಜು ಕೂಡ ಇದ್ದು ನಗರದ ಬಹುಪಾಲು ಮಂದಿ ವಾಯುವಿಹಾರ ಮಾಡುವ ಸ್ಥಳದಲ್ಲೇ ಆನೆ ಕಾಣಿಸಿಕೊಂಡಿರುವುದು ಜನರ ಭಯಕ್ಕೆ ಕಾರಣ. ಎಡಬೆಟ್ಟದ ಮೂಲಕ ಆನೆಗಳನ್ನು ಕಾಡಿಗಟ್ಟುವ ಕಾರ್ಯದಲ್ಲಿ ಬಿಆರ್ಟಿ ಅರಣ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ.

ABOUT THE AUTHOR

...view details